ಬೆಂಗಳೂರು: ಜನವರಿಯಲ್ಲಿ ಬಿಲ್ಲವ ಸಮುದಾಯದ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಅದಕ್ಕೆ ನನ್ನ ಬೆಂಬಲವೂ ಇದೆ ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಜಾತಿಗಣತಿಯನ್ನು ಸ್ವೀಕರಿಸುವುದು ನಂತರದ ವಿಷಯ. ಆದರೆ ವರದಿಯನ್ನು ಮೊದಲು ಬಹಿರಂಗಗೊಳಿಸಬೇಕು.
ಆಗ ಯಾವ ಸಮುದಾಯ, ಯಾವ ಮಟ್ಟದಲ್ಲಿದೆ ಎಂದು ತಿಳಿಯಲಿದೆ ಎಂದ ಅವರು, ವರದಿ ಸ್ವೀಕರಿಸಬಾರದೆಂದು ಡಿಕೆಶಿ ಸಹಿ ಹಾಕಿರುವ ಬಗ್ಗೆ ಏನೂ ಮಾತನಾಡಲ್ಲ ಎಂದರು.