ಜಮ್ಮು-ಕಾಶ್ಮೀರ: ಹಲವು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಯಿಂದ ಜಮ್ಮು ಕಾಶ್ಮೀರ ತತ್ತರಿಸಿದ್ದು, ಭೂಕುಸಿತ, ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಭೂಕಂಪ ಸಂಭವಿಸಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಬೆಳಗ್ಗೆ 5.38 ಗಂಟೆಗೆ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರ ಬಿಂದು ದೋಡಾ ಪ್ರದೇಶದಲ್ಲಿ ಭೂಮಿಯ ಮೇಲ್ಮೈಯಿಂದ 10 ಕಿ.ಮೀ. ಇದು ಅಕ್ಷಾಂಶ 33.15 ಡಿಗ್ರಿ ಉತ್ತರ ಮತ್ತು ರೇಖಾಂಶ 75.68 ಡಿಗ್ರಿ ಪೂರ್ವದಲ್ಲಿ ಸಂಭವಿಸಿದೆ ಎಂದು ಎನ್ ಸಿ ಎಸ್ ಹೇಳಿದೆ.