ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ನೆಲಬಾಂಬ್ ಸ್ಫೋಟದಲ್ಲಿ ಯೋಧರೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ರೈಫಲ್ಮ್ಯಾನ್ ಗುರುಚರಣ್ ಸಿಂಗ್ ಅವರು ಗಸ್ತು ಕರ್ತವ್ಯದಲ್ಲಿದ್ದು ಆಕಸ್ಮಿಕವಾಗಿ ನೌಶೆರಾ ಸೆಕ್ಟರ್ನ ಫಾರ್ವರ್ಡ್ ಕಲ್ಸಿಯಾನ್ ಗ್ರಾಮದಲ್ಲಿ ನೆಲಬಾಂಬ್ ಮೇಲೆ ಹೆಜ್ಜೆ ಹಾಕಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಗುರುಚರಣ್ ಸಿಂಗ್ ಅವರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಪ್ರಥಮ ಚಿಕಿತ್ಸೆಯ ನಂತರ ವಿಶೇಷ ಚಿಕಿತ್ಸೆಗಾಗಿ ಕಮಾಂಡ್ ಆಸ್ಪತ್ರೆ ಉಧಂಪುರಕ್ಕೆ ಅವರನ್ನು ವಿಮಾನದಲ್ಲಿ ಸಾಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.