ತೆಲಂಗಾಣ: ತೆಲಂಗಾಣದ ಪ್ರಸ್ತಿದ್ದ ಜಲಪಾತವಾದ ಮುತ್ಯಾಲ ಧಾರಾ ಜಲಪಾತದಲ್ಲಿ ಸಿಲುಕಿದ್ದ 80 ಮಂದಿ ಪ್ರವಾಸಿಗರನ್ನು ರಕ್ಷಣಾ ತಂಡ ರಕ್ಷಿಸುವವಲ್ಲಿ ಯಶಸ್ವಿಯಾಗಿದ್ದಾರೆ.
ಹಲವೆಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತವನ್ನು ಕಣ್ತುಂಬಿಕೊಳ್ಳಲು ಹೋಗಿದ್ದರು ಆದರೆ ಜಲಪಾತ ವೀಕ್ಷಿಸಿ ಹಿಂತಿರುಗುವ ವೇಳೆ ಭಾರಿ ಮಳೆ ಸುರಿದ ಪರಿಣಾಮ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಸಿಗರು ಅರಣ್ಯದ ನಡುವೆ ಸಿಲುಕಿಕೊಂಡಿದ್ದು, ಸರಿಯಾಗಿ ಫೋನ್ ಸಂಪರ್ಕವೂ ಸಿಗುತ್ತಿರಲಿಲ್ಲ.
ರಾತ್ರಿಯಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ದೊರಕಿ ಇಂದು ಬೆಳಗ್ಗೆ ಎಲ್ಲಾ ಎಂಬತ್ತು ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಈ ಪೈಕಿ ಓರ್ವ ಪ್ರವಾಸಿಗನ ಅರೋಗ್ಯ ಹದಗೆಟ್ಟಿತ್ತು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ