ಚಿತ್ರದುರ್ಗ: 18ನೇ ಲೋಕಸಭೆಯಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ. ಕಾರಜೋಳರವರನ್ನು ಸಂಸತ್ತಿನ ಜಲ ಶಕ್ತಿ ಸಂಸದೀಯ ಸಲಹಾ ಸಮಿತಿಯ ಸದಸ್ಯರನ್ನಾಗಿ ಲೋಕಸಭಾ ಸ್ಪೀಕರಾದ ಓಂ ಬಿರ್ಲಾರವರು ನೇಮಕ ಮಾಡಿರುತ್ತಾರೆ.
ಈ ಸಲಹಾ ಸಮಿತಿಯಲ್ಲಿ ಒಬ್ಬರು ರಾಜ್ಯ ಸಭಾ ಸದಸ್ಯರು ಹಾಗೂ 15 ಜನ ಲೋಕಸಭಾ ಸದಸ್ಯರುಗಳು ಹಾಗೂ ಇಬ್ಬರು ಪದನಿಮಿತ್ತ ಸದಸ್ಯರು ಕಾರ್ಯನಿರ್ವಹಿಸಲಿದ್ದು, ಈ ಸಲಹಾ ಸಮಿತಿಯ ಅಧ್ಯಕ್ಷರುಗಳನ್ನಾಗಿ ಸಿ.ಆರ್. ಪಾಟೀಲ್, ವಿ. ಸೋಮಣ್ಣ ಹಾಗೂ ರಾಜ್ ಭೂಷಣ್ ಚೌಧರಿ ಇವರುಗಳನ್ನು ನೇಮಕ ಮಾಡಲಾಗಿದೆ.