ಜಾಗತಿಕ ಲಿಂಗಾಯತ ಮಹಾಸಭಾ: ಸಾಣೇಹಳ್ಳಿಯ ಶ್ರೀ ತರಳಬಾಳು ಶ್ರೀಗಳು ಹೇಳಿದ್ದೇನು.?

 

ಚಿತ್ರದುರ್ಗ : ಬಸವೇಶ್ವರರ ವಿಚಾರಧಾರೆಗಳನ್ನು ನಾವು ಅಳವಡಿಸಿಕೊಂಡರೆ ಅದೇ ಲಿಂಗಾಯತ ಪ್ರತ್ಯೇಕ ಧರ್ಮ.ನಮ್ಮ ಹೋರಾಟದಲ್ಲಿ ಗಟ್ಟಿಕಾಳುಗಳ ಸಂಖ್ಯೆ ಕಡಿಮೆ ಇದೆ. ಅದು ಸದೃಢವಾಗಬೇಕು ಹಾಗಾದರೆ ಮಾತ್ರ ಹೊರಟಕ್ಕೆ ಶಕ್ತಿ ಬರುತ್ತೆ. ಪದಾಧಿಕಾರಿಗಳು ನಡೆ ನುಡಿ ಶುದ್ಧವಾಗಿಟ್ಟುಕೊಳ್ಳಬೇಕು ಇಲ್ಲದೆ ಹೋದರೆ ೨೪ ಗಂಟೆ ಪೂಜೆ ಮಾಡಿದರೂ ಉಪಯೋಗಕ್ಕೆ ಬಾರದು. ಎಂದು  ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಶಾಖಾಮಠದ ಸ್ವಾಮೀಜಿಗಳಾದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.

ಚಿತ್ರದುರ್ಗ ನಗರದ ತ.ರಾ.ಸು. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಲಿಂಗಾಯತ ಮಹಾಸಭಾ (ರಿ), ಬೆಂಗಳೂರು ಚಿತ್ರದುರ್ಗ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಹೋರಾಟಕ್ಕೆ ಶಕ್ತಿ ಬರಬೇಕಾದರೆ ಇಷ್ಟಲಿಂಗ ದೀಕ್ಷೆ ಪಡೆದಿರಬೇಕು.. ೧೨ನೇ ಶತಮಾನದಲ್ಲಿ ಶ್ರೀ ಬಸವೇಶ್ವರರು ಇಷ್ಟಲಿಂಗ ದೀಕ್ಷೆ ಪಡೆದಿದ್ದರು.ಸಮ ಸಮಾಜ ನಿರ್ಮಾಣ ಮಾಡುವ ಮನಸ್ಥಿತಿ ನಮ್ಮಲ್ಲಿ ಮೂಡಬೇಕು.. ಎಲ್ಲರನ್ನೂ ಅಪ್ಪಿಕೊಳ್ಳುವ… ಒಪ್ಪಿಕೊಳ್ಳುವ.. ಮನಸ್ಥಿತಿ ನಮ್ಮಲ್ಲಿ ಬರಬೇಕಾಗಿದೆ. ಬಸವೇಶ್ವರರು ನಡೆ-ನುಡಿಯನ್ನು ಒಂದಾಗಿಸಿಕೊಂಡಿದ್ದರ ಪರಿಣಾಮ ಮಹಾನ್ ಸಾಧಕರು ಕೂಡಲಸಂಗಮಕ್ಕೆ ಬರುತ್ತಾರೆ.ಅಲ್ಲಮ ಪ್ರಭುರವರೇ ಬಸವಣ್ಣರವರನ್ನು ಗುರು ಎಂದು ಕರೆದಿದ್ದರು. ಸದ್ವಿಚಾರ.ಸಾತ್ವಿಕ ಗುಣಗಳನ್ನು ಬೆಳಸಿಕೊಂಡರೆ ಅದೇ ನಿಜವಾದ ಲಿಂಗಾಯಿತ ಧರ್ಮ ಎಂದರು.

Advertisement

ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಜಯ ಬಸವಕುಮಾರ ಸ್ವಾಮೀಜಿ , ಚಿತ್ರದುರ್ಗದ ಬಸವಮಂಟಪದ ಮಾತಾ ದಾನೇಶ್ವರಿ ತಾಯಿ ಮಾತನಾಡಿದರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ ಜಿ.ಎನ್. ಮಲ್ಲಿಕಾರ್ಜುನಪ್ಪ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾಂ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ರೊಟ್ಟಿ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಹನುಮೇಶ ಕಲಮಂಗಿ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಮಹಾದೇವಪ್ಪ, ದಾವಣಗೆರೆ ಜಿಲ್ಲಾ ಘಟಕ ಅಧ್ಯಕ್ಷರಾದ ರುದ್ರಮುನಿಸ್ವಾಮಿ, ದಾವಣಗೆರೆ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕುಸುಮ ಲೋಕೇಶ್ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಸಂಚಾಲಕರಾದ ಜಿ.ಡಿ. ಕೆಂಚವೀರಪ್ಪ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಆರ್.ಬಾಬು ಭಾಗವಹಿಸಿದ್ದರು.

ಶ್ರೀ ಗಾನಯೋಗಿ ಸಂಗೀತ ಬಳಗದ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಉತ್ತಂಗಿ ಪ್ರಾಸ್ತಾವಿಕವಾಗಿ ಬಸವರಾಜ ಕಟ್ಟಿ ಮಾತನಾಡಿದರೆ, ಶ್ರೀಮತಿ ಶೈಲಜಾ ಆರ್. ಬಾಬು ಸ್ವಾಗತಿಸಿದರು.ಧನಂಜಯ ಎ.ಬಿ., ಲಕ್ಷ್ಮೀಸಾಗರ ಶರಣು ಸಮರ್ಪಣೆ ಮಾಡಿದರೆ ನಿವೃತ್ತ ಉಪನ್ಯಾಸಕ ನಂದೀಶ ಜಿ.ಟಿ., ಕಾರ್ಯಕ್ರಮ ನಿರೂಪಿಸಿದರು.

 

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement