ಯಾದಗಿರಿ: ಕೃಷ್ಣಾ ನದಿ ತೀರದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವ.. ಕಣ್ಣಾಯಿಸಿದಷ್ಟು ಜನಸಾಗರ, ತಮ್ಮ ಹರಕೆಗಳನ್ನು ತೀರಿಸುತ್ತಿರುವ ಭಕ್ತರು ಒಂದೆಡೆಯಾದರೆ, ತಮ್ಮ ಇಷ್ಟಾರ್ಥ ಸಿದ್ಧಿಗಳಿಗಾಗಿ ದೇವರ ಮೊರೆ ಹೋಗಿರುವ ಭಕ್ತರು ಇನ್ನೊಂದೆಡೆ. ಇನ್ನು ಹಲವರು ತಮಗೆ ಬೇಕಾದ ಇಷ್ಟದ ವಸ್ತುಗಳನ್ನು ಖರೀದಿಸುತ್ತಾ ಜಾತ್ರೆಯ ಸಡಗರದಲ್ಲಿದ್ದರೂ. ಈ ಎಲ್ಲಾ ಸಂಭ್ರಮದ ನಡುವೆ ಭೀಕರ ಘಟನೆ ಒಂದು ನಡೆದು ಹೋಗಿದೆ. ಹೌದು. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯ ಜಗದ್ಗುರು ಶ್ರೀ ಮೌನೇಶ್ವರ ಜಾತ್ರೆಯಲ್ಲಿ ಬಳೆ ವ್ಯಾಪಾರಿಯ ಬರ್ಬರ ಹತ್ಯೆಯಾಗಿರುವ ದುರ್ಘಟನೆ ನಡೆದು ಹೋಗಿದೆ. ಇದರಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹದಲ್ಲಿ ಆತಂಕ ಮನೆ ಮಾಡಿದೆ . ಒಂದು ವಾರಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಬಳೆ ವ್ಯಾಪಾರಕ್ಕೆಂದು ಬಂದಿದ್ದ. ಬೆಳಗಾವಿ ಮೂಲದ ಮಲ್ಲಪ್ಪ ಶಿವಲಿಂಗಪ್ಪ(38) ಎನ್ನುವ ವ್ಯಕ್ತಿಯ ಕತ್ತುಸಿಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಡರಾತ್ರಿ 12:40ರ ಸುಮಾರಿಗೆ ವ್ಯಾಪಾರ ಮುಗಿಸಿ ನಿದ್ದೆಗೆ ಜಾರುವ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿದೆ. ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಬುರ್ರಾನ ಎನ್ನುವ ವ್ಯಕ್ತಿ ಕೊಲೆಯ ಆರೋಪಿಯಾಗಿದ್ದಾನೆ. ಕೊಲೆಗೆ ನಿಖರವಾದ ಕಾರಣ ಪೊಲೀಸ್ ತನಿಖೆ ಇಂದ ತಿಳಿದು ಬರಬೇಕಾಗಿದೆ, ಸದ್ಯ ಪಾತಕಿ ಬುರ್ರಾನ್ ನ್ನು ಸುರಪುರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುರಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.