ನವದೆಹಲಿ: ಹರಿಯಾಣದ ಫರಿದಾಬಾದ್ ನಲ್ಲಿ ಕೃಷಿ ಭೂಮಿ ಖರೀದಿಸುವಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾತ್ರವಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿದೆ.
ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್ ಎಲ್ ಪಹ್ವಾ ಎಂಬುವವರಿಂದ 2006 ರಲ್ಲಿ ಭೂಮಿ ಖರೀದಿ ಮಾಡಿ, ಫೆಬ್ರವರಿ 2010 ರಲ್ಲಿ ಅದೇ ಭೂಮಿಯನ್ನು ಅವರಿಗೆ ಮಾರಾಟ ಮಾಡುವಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ. ಆದರೆ ಪ್ರಿಯಾಂಕ ಅವರನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಉಲ್ಲೇಖ ಮಾಡಿಲ್ಲ.
ಭೂಮಿ ಖರೀದಿ ಪ್ರಕ್ರಿಯೆಯಲ್ಲಿ ಪ್ರಿಯಾಂಕಾ ಅವರು ಇದ್ದಾರೆ. ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರು 2005-2006 ರ ಮಧ್ಯೆ 40.08 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ಖರೀದಿ ಮಾಡಿದ್ದಾರೆ. ಡಿಸೆಂಬರ್ 2010 ರಲ್ಲಿ ಖರೀದಿಸಿದ ಅದೇ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಇನ್ನು ಡಿಸೆಂಬರ್ 26 ರಂದು ಜಾರಿ ನಿರ್ದೇಶನಾಲಯವು ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿತ್ತು.