ಫತೇಪುರ: ಜೈಲಿನಿಂದ ಬಿಡುಗಡೆ ಆಗಿ ಬಂದ ಡಕಾಯಿತನೊಬ್ಬ ಜೀವಂತ ಹಾವನ್ನು ಹಿಡಿದು ಕಚ್ಚಿ ತಿಂದಿದ್ದಾನೆ. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಫತೇಪುರದಲ್ಲಿ ಡಕಾಯಿತ ಗಂಗಾ ಪ್ರಸಾದ್ ಕೇವತ್ ಎಂಬ ಡಕಾಯಿತನ ವೀಡಿಯೊ ವೈರಲ್ ಆಗಿದೆ. ಈತ ‘ಶಂಕರ್ ಗ್ಯಾಂಗ್’ನಲ್ಲಿ ಸುಲಿಗೆ ಮಾಡುತ್ತಿದ್ದ ಡಕಾಯಿತನಾಗಿದ್ದ. ಜೈಲಿನಿಂದ ಹೊರಬಂದ ಈತ ಏನು ಮಾಡಬೇಕೆಂಬುದು ತಿಳಿಯದೇ ನದಿ ದಡಕ್ಕೆ ಹೋಗಿದ್ದಾನೆ. ನಂತರ ನದಿಯಲ್ಲಿ ಜೀವಂತ ಹಾವನ್ನು ಹಿಡಿದಿದ್ದಾನೆ. ಅದೇ ಹಾವಿನ ತಲೆಯನ್ನು ಕಚ್ಚಿ ತಿಂದಿದ್ದಾನೆ. ಇದಕ್ಕೂ ಮುನ್ನ ಈತ ನದಿಯಲ್ಲಿ ಮೀನುಗಳನ್ನು ಹಿಡಿದು ಜೀವಂತವಾಗಿ ತಿನ್ನುತ್ತಿದ್ದ ಎನ್ನಲಾಗಿದೆ.
