ನವದೆಹಲಿ : ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಜೀವ ವಿಮೆ ಹಾಗೂ ವೈದ್ಯಕೀಯ ವಿಮಾ ಕಂತುಗಳ ಮೇಲೆ ವಿಧಿಸಲಾಗುತ್ತಿದೆ. ಅದರಿಂದ (ಜಿಎಸ್‌ಟಿ) ಹಿಂಪಡೆಯುವಂತೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ಗೆ ಮನವಿ ಮಾಡಿದ್ದಾರೆ.
ಜೀವ ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದು ಜೀವನದ ಅನಿಶ್ಚಿತತೆಗಳ ಮೇಲೆ ವಿಧಿಸುವಂತಿದೆ. ಕುಟುಂಬಕ್ಕೆ ರಕ್ಷಣೆ ಒದಗಿಸುವುದಕ್ಕಾಗಿ ವ್ಯಕ್ತಿಯೊಬ್ಬರು ಖರೀದಿಸುವ ಜೀವ ವಿಮೆಗಳ ಕಂತಿನ ಮೇಲೆ ತೆರಿಗೆ ವಿಧಿಸಬಾರದು ಎಂದು ಒಕ್ಕೂಟವು ತನ್ನ ಭಾವನೆಯನ್ನು ವ್ಯಕ್ತಪಡಿಸಿದೆ ಎಂದು ಹೆದ್ದಾರಿ ಸಚಿವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.!
ವಿಮಾ ಉದ್ಯಮದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾಗುರ ವಿಭಾಗದ ಜೀವ ವಿಮಾ ನಿಗಮ ನೌಕರರ ಒಕ್ಕೂಟವು ತಮಗೆ ಸಲ್ಲಿಸಿದ್ದ ಮನವಿಯನ್ನು ಉಲ್ಲೇಖಿಸಿ, ಹಣಕಾಸು ಸಚಿವರಿಗೆ ಗಡ್ಕರಿ ಪತ್ರ ಬರೆದಿದ್ದಾರೆ.