ಬೆಳಗಾವಿ: ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರು ಕಾಯುತ್ತಿರುವಂತ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ, 2000 ಹಣ ಪಡೆಯಲು ಅರ್ಜಿ ಸಲ್ಲಿಕೆ ಜುಲೈ.14ರಿಂದ ಆರಂಭಗೊಳ್ಳಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಜಮಾನಿ ಮಹಿಳೆಯರು ಕಾಯುತ್ತಿರುವಂತ ಮಹತ್ವದ ನಮ್ಮ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಕೆ ಬಗ್ಗೆ ಜುಲೈ.3 ಅಥವಾ 4ರಂದು ಮಹತ್ವದ ಘೋಷಣೆ ಮಾಡುತ್ತೇವೆ.
ಆಗಸ್ಟ್ ತಿಂಗಳಿನಿಂದಲೇ ಕುಟುಂಬದ ಯಜಮಾನಿ ಗೃಹ ಲಕ್ಷ್ಮೀಯರ ಖಾತೆಗೆ 2000 ಹಣ ಹಾಕಲಾಗುತ್ತದೆ ಎಂದರು. ಈ ತಿಂಗಳಿನಿಂದ ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ಲಾಭ ರಾಜ್ಯದ ಜನರಿಗೆ ಸಿಗಲಿದೆ. ಮುಂದಿನ ಆಗಸ್ಟ್ ನಿಂದ ಗೃಹ ಲಕ್ಷ್ಮೀ ಯೋಜನೆಯಡಿ ಮನೆಯ ಕುಟುಂಬದ ಯಜಮಾನಿ ಮಹಿಳೆಯರಿಗೆ ಸಿಗಲಿದೆ ಎಂದು ತಿಳಿಸಿದರು.
ನಾವು ಘೋಷಿಸಿರುವಂತ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಅದರಲ್ಲಿ ಯಾವುದೇ ಡೌಟ್ ಇಲ್ಲ ಎಂದರು.
ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಆಗಸ್ಟ್ 16 ರಿಂದ ಮನೆ ಒಡತಿಯರ ಖಾತೆಗೆ 2 ಸಾವಿರ ಹಣ ಜಮಾ ವಾಗಲಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಅವರು ರಾಜ್ಯ ಸರ್ಕಾರದ ಈ ಚಾಲನೆ ಆ 16 ರಂದು ಸಿಗಲಿದೆ ಅಂತ ತಿಳಿಸದಿರು. ನಮ್ಮ ಸರ್ಕಾರದ ಎಲ್ಲಾ ಗ್ಯಾರಂಟಿಗಳನ್ನು ಹಂತವಾಗಿ ಜಾರಿಗೆ ತರಲಿದ್ದೇತ ಹೇಳಿದ ಅವರು, ನಾವು ನುಡಿದಂತೆ ನಡೆದ ಸರ್ಕಾರವಾಗಿದೆ ಅಂಥ ತಿಳಿಸಿದರು.