ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕರನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿತ್ರ ಪಕ್ಷದ ನಾಯಕರು ಅವಿರೋಧವಾಗಿ ಬುಧವಾರ ಆಯ್ಕೆ ಮಾಡಿದ್ದಾರೆ. ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಖಾತೆ ಹಂಚಿಕೆಯ ವಿಚಾರದಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಮಿತ್ರಪಕ್ಷಗಳು ದೊಡ್ಡದೊಡ್ಡ ಸ್ಥಾನಗಳಿಗೆ ಬೇಡಿಕೆ ಇಡುತ್ತಿವೆ. ಆದ್ರೆ ಬಿಜೆಪಿ ಈ ವಿಚಾರದಲ್ಲಿ ಲಕ್ಷ್ಮಣ ರೇಖೆ ಎಳೆದಿದೆ ಎನ್ನಲಾಗುತ್ತಿದೆ. ದೇಶದ ನೀತಿ ನಿರೂಪಣೆಗೆ ಮುಖ್ಯವಾದ CCS ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿಯಲ್ಲಿ ಬರೋ ಗೃಹ, ಹಣಕಾಸು, ರಕ್ಷಣೆ ಹಾಗೂ ವಿದೇಶಾಂಗ ಖಾತೆಗಳನ್ನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲ್ಲ ಎಂದು ಬಿಜೆಪಿ ಮಿತ್ರಪಕ್ಷಗಳಿಗೆ ಸ್ಪಷ್ಟವಾಗಿ ಹೇಳಿದೆ ಎನ್ನಲಾಗಿದೆ. ಅಲ್ಲದೇ ಮೂಲಸೌಕರ್ಯ, ಸಮಾಜ ಕಲ್ಯಾಣ, ಕೃಷಿ, ಕ್ರೀಡೆ ಮತ್ತು ಯುವ ಸಬಲೀಕರಣ ಖಾತೆಗಳನ್ನ ಕೂಡ ತನ್ನ ಬಳಿನೇ ಇಟ್ಕೊಳೋಕೆ ತೀರ್ಮಾನಿಸಿದೆ ಎನ್ನಲಾಗಿದೆ. ಇನ್ನು ಸಾಂಪ್ರದಾಯಿಕವಾಗಿ ರೈಲ್ವೇ ಖಾತೆಯನ್ನು ಮಿತ್ರಪಕ್ಷಗಳಿಗೆ ನೀಡಲಾಗುತ್ತಿತ್ತು. ಆದರೆ ಬಿಜೆಪಿ ರೈಲ್ವೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದರಿಂದ ಅದನ್ನು ಕೈಬಿಡೋಕಾಗಲ್ಲ. ಹೀಗಾಗಿ ರೈಲ್ವೇ ಮತ್ತು ರಸ್ತೆ ಖಾತೆಗಳನ್ನ ಕೂಡ ತನ್ನ ಬಳಿನೇ ಇಟ್ಟುಕೊಳ್ಳುತ್ತೆ. ಉಳಿದಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಗಳನ್ನ ಜೆಡಿಯುಗೆ. ಹಾಗೆ ಸ್ಟೀಲ್ ಮತ್ತು ನಾಗರಿಕ ವಿಮಾನಯಾನ ಖಾತೆಗಳನ್ನು TDP ನೀಡಬಹುದು. ಅತ್ತ ಬೃಹತ್ ಕೈಗಾರಿಕೆ ಶಿವಸೇನೆ ಏಕನಾಥ್ ಶಿಂಧೆ ಬಣಕ್ಕೆ ಸಿಗಬಹುದು ಎನ್ನಲಾಗಿದೆ. ಇನ್ನು TDP ಸ್ಪೀಕರ್ ಹುದ್ದೆಯನ್ನ ಕೂಡ ಕೇಳಿತ್ತು. ಆದ್ರೆ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಸ್ಪೀಕರ್ ಸ್ಥಾನ ಇಂಪಾರ್ಟೆಂಟ್ ಆಗುತ್ತದೆ. ಹೀಗಾಗಿ ಅದನ್ನ ಕೂಡ ಬಿಟ್ಟುಕೊಡಲ್ಲ ಎನ್ನಲಾಗಿದೆ. ಅದರ ಬದಲಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು TDPಗೆ ಕೊಡಬಹುದು ಎನ್ನಲಾಗಿದೆ.