ಜೂ. 26ಕ್ಕೆ ಲೋಕಸಭಾ ಸ್ಪೀಕರ್ ಚುನಾವಣೆ; ಜೂ.25ರವರೆಗೆ ಬೆಂಬಲ ಪತ್ರ ಸಲ್ಲಿಸಲು ಅವಕಾಶ

ದೆಹಲಿ: ಲೋಕಸಭಾ ಚುನಾವಣೆಯ ಬೆನ್ನಲ್ಲೇ ಜೂನ್ 24ರಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನ ಪ್ರಾರಂಭವಾಗಿ 2 ದಿನಗಳ ಬಳಿಕ ಅಂದರೆ ಜೂನ್ 26ಕ್ಕೆ ಲೋಕಸಭಾ ಸ್ಪೀಕರ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳನ್ನು ಬೆಂಬಲಿಸುವ ಪತ್ರವನ್ನು ಜೂನ್ 25ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು ಎಂದು ಲೋಕಸಭಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸ್ಪೀಕರ್ ಸ್ಥಾನಕ್ಕೆ ಸರ್ಕಾರ ಇನ್ನೂ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಈ ಹಿನ್ನಲೆ ಸರ್ಕಾರದ ನಡೆ ಕುತೂಹಲಕ್ಕೆ ಕಾರಣವಾಗಿದೆ. ಜೂನ್ 24ರಿಂದ ಆರಂಭಗೊಳ್ಳುವ ಈ ಅಧಿವೇಶನವು ಜುಲೈ 3ಕ್ಕೆ ಮುಕ್ತಾಯಗೊಳ್ಳಲಿದೆ.

ಅಭ್ಯರ್ಥಿಗಳನ್ನು ಬೆಂಬಲಿಸುವ ಪತ್ರವನ್ನು ಚುನಾವಣೆ ನಡೆಯುವ ಮಧ್ಯಾಹ್ನ 12ಗಂಟೆಯೊಳಗೆ ಸೆಕ್ರೇಟರಿ ಜನರಲ್‌ಗೆ ಲಿಖಿತ ರೂಪದಲ್ಲಿ ನೀಡುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಒಂದು ದಿನ ಮುಂಚಿತವಾಗಿಯೇ ಬೆಂಬಲ ಪತ್ರ ನೀಡಬೇಕು. ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲೆರಡು ದಿನ ಮೀಸಲಾಗಿದ್ದರೆ, ಜೂನ್ 26ಕ್ಕೆ ಸ್ಪೀಕರ್ ಆಯ್ಕೆಗೆ ದಿನಾಂಕ ನಿಗದಿ ಪಡಿಸಲಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement