ಬೆಂಗಳೂರು; ನಮ್ಮದೇ ಒರಿಜಿನಲ್ JDS ಎಂದಿರುವ ಸಿ.ಎಂ.ಇಬ್ರಾಹಿಂಗೆ ಬಿಜೆಪಿ ಶಾಸಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
JDS ಅಂದರೆ ದೇವೇಗೌಡರು, ದೇವೇಗೌಡರು ಅಂದರೆ JDS. ಸಿಎಂ ಇಬ್ರಾಹಿಂ ಮಾತನ್ನು ಕೇಳುವವರು ಯಾರು? ಅಶೋಕ್ ಪ್ರಶ್ನಿಸಿದ್ದಾರೆ.
ಜೆಡಿಎಸ್ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರೊ ಹಳೆ ಶಾಸಕರನ್ನು ಇಟ್ಟಿಕೊಂಡು ಇಬ್ರಾಹಿಂ ನಿನ್ನೆ ಸಭೆ ಮಾಡಿದ್ದಾರೆ. ನಿನ್ನೆ ಯಾರಿದ್ದರೂ? ಎಷ್ಟು ಜನ ಶಾಸಕರು? ಇದ್ದರು ಅನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಅಶೋಕ್ ತಿಳಿಸಿದ್ದಾರೆ.