ಪಾಟ್ನಾ: ಟೀಂ ಇಂಡಿಯಾ ಕ್ರಿಕೆಟಿಗ ಇಶಾನ್ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಭಾನುವಾರ ಬಿಹಾರದ ಪಾಟ್ನಾದಲ್ಲಿ ಜೆಡಿಯು ಸೇರಿದ್ದಾರೆ. ಪ್ರಣವ್ ವೃತ್ತಿಯಲ್ಲಿ ಬಿಲ್ಡರ್ ಆಗಿದ್ದು, ಪಾಟ್ನಾದಲ್ಲಿ ಮೆಡಿಕಲ್ ಸ್ಟೋರ್ ಕೂಡ ನಡೆಸುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಣವ್ ಅವರನ್ನು ನಾವಡಾ ಅಥವಾ ಓಬ್ರಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ.
