ಬೆಂಗಳೂರು : ಕೊಲೆ ಕೇಸ್ ನಲ್ಲಿ ಜೈಲು ಸೇರಿರೋ ನಟ ದರ್ಶನ್ ಒಂಟಿತನಕ್ಕೆ ಜಾರಿದ್ದಾರಂತೆ. ದರ್ಶನ್ ಗೆ ಪ್ರತೀಕ್ಷಣವೂ ಸಮಯ ಕಳೆಯೋದೆ ಚಿಂತೆಯಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟ ಸಮಯ ಕಳೆಯಲು ಟಿವಿ ಮೊರೆ ಹೋಗಿದ್ದಾರಂತೆ. ವಿಐಪಿ ಬ್ಯಾರಕ್ ನಲ್ಲಿರೋ ದರ್ಶನ್ ಸೆಲ್ ನಲ್ಲಿ ಟಿವಿ ವ್ಯವಸ್ಥೆ ಇದೆ. ಟಿವಿಯಲ್ಲಿ ಆಗ್ಗಾಗ್ಗೆ ಹಿಂದಿ ಫಿಲಂ ಗಳನ್ನ ನೋಡ್ತಿರೊ ದರ್ಶನ್ ಹಿಂದಿ ಫಿಲಂ ಗಳಲ್ಲದೆ ಸ್ಪೋರ್ಟ್ಸ್ ಚಾನೆಲ್ ಗಳನ್ನ ವೀಕ್ಷಣೆ ಮಾಡ್ತಿದ್ದಾರಂತೆ. ಟಿವಿ ನೋಡಬೇಕು ಅಂದ್ರೆ ಹಿಂದಿ ಫಿಲಂ ಇಲ್ಲ ಸ್ಪೋರ್ಟ್ಸ್ ಚಾನೆಲ್ ನ ಹೆಚ್ಚು ನೋಡ್ತಿದ್ದಾರಂತೆ. ದರ್ಶನ್ ಜೈಲಿನಲ್ಲಿ ಅಪ್ಪಿತಪ್ಪಿಯೂ ನ್ಯೂಸ್ ಚಾನಲ್ ನೋಡ್ತಿಲ್ವಂತೆ. ತನ್ನ ಬಗ್ಗೆ ಟಿವಿಯಲ್ಲಿ ಏನ್ ಹಾಕ್ತಿದ್ದಾರೆ ಅಂತಾ ಕುತೂಹಲಕ್ಕಾದ್ರು ನ್ಯೂಸ್ ಚಾನೆಲ್ ಹಾಕದ ದರ್ಶನ್ ಎಂಟರ್ ಟೈನ್ ಮೆಂಟ್ ಗೆ , ಮೈಂಡ್ ರಿಲೀಫ್ ಗೆ ಹಿಂದಿ ಫಿಲಂ ಗಳನ್ನ ನೋಡ್ತಿದ್ದರಂತೆ. ಇನ್ನೂ ಸೆಲ್ ನಲ್ಲಿ ದರ್ಶನ್ ಜೊತೆಗೆ ಸೆಲ್ ನಲ್ಲಿ ವಿನಯ್, ಪ್ರದೋಶ್ ಸಹ ಇದ್ದಾರೆ. ಬ್ಯಾರಕ್ ಆವರಣದಲ್ಲಿ ಆಗಾಗ ವಾಕ್ ಮಾಡೋ ದರ್ಶನ್ ಯಾರ ಜೊತೆಗೆ ಮಾತನಾಡ್ತಿಲ್ವಂತೆ. ಇನ್ನೂ ದರ್ಶನ್ ನೋಡಲು ಜೈಲಿನಲ್ಲಿ ಕೆಲವರು ಮುಂದಾಗಿದ್ರೆ ಹೊರಗಡೆಯಿಂದ ಅಭಿಮಾನಿಗಳು ದರ್ಶನ್ ನೋಡಲು ದುಂಬಾಲು ಬೀಳ್ತಿದ್ದಾರೆ. ಆದ್ರೆ ಯಾರ ಭೇಟಿಗೂ ದರ್ಶನ್ ಒಪ್ತಿಲ್ವಂತೆ.
