ಬೆಂಗಳೂರು : ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರೋ ಪವಿತ್ರಾ ಗೌಡ ಜೈಲಲ್ಲಿ ಕಂಗಾಲಾಗಿದ್ದಾರೆ. ಜೈಲಿನಲ್ಲಿ ಅಕ್ಷರಶಃ ಒಂಟಿಯಾಗಿರೋ ಪವಿತ್ರಾಗೆ ದರ್ಶನ್ ಮೌನ ಚಿಂತೆಗೀಡು ಮಾಡಿದೆ. ಒಂದೇ ಜೈಲಿನಲ್ಲಿದ್ರು ದರ್ಶನ್ ಪವಿತ್ರಾ ಭೇಟಿಗೆ ಮುಂದಾಗ್ತಿಲ್ಲ. ಇನ್ನೊಂದೆಡೆ ಕೇಸ್ ನಿಂದ ಹೊರಗಡೆ ಬರೋಕೆ ದರ್ಶನ್ ವಕೀಲರನ್ನ ನೇಮಕ ಮಾಡ್ತಾರೋ ಇಲ್ವೋ ಅನ್ನೋ ಶಂಕೆ ಮೂಡಿದೆ. ಇದೇ ಕಾರಣಕ್ಕೆ ಪವಿತ್ರಾ ದರ್ಶನ್ ಭೇಟಿಗೆ ಸ್ನೇಹಿತೆ ಸಮತಾ@ ಸ್ಯಾಮ್ ನ ಕಳುಸಿದ್ರಾ ಅನ್ನೋ ಅನುಮಾನ ಇದೆ. ಸಮತಾ ದರ್ಶನ್ ಬಳಿ ವಕೀಲರು, ಹಾಗೂ ಖರ್ಚು ವೆಚ್ಚಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಇದಕ್ಕೆ ದರ್ಶನ್ ಏನೂ ಉತ್ತರ ನೀಡಿದ್ದಾರೆ ಅನ್ನೊದು ಗೊತ್ತಾಗ್ತಿಲ್ಲ. ಇನ್ನು, ಪವಿತ್ರಾ ಗೌಡ ನಡೆಸ್ತಿರೋ ಬೂಟಿಕ್ ನ ಕೂಡ ಮಾರಾಟ ಮಾಡಲು ಪವಿತ್ರಾ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ಇತ್ತ ಪವಿತ್ರ ಸ್ನೇಹಿತೆ ಸಮತಾ ಭೇಟಿಯಾಗಿರೋದಕ್ಕೆ ವಿಜಯಲಕ್ಷ್ಮಿ ಕೋಪಗೊಂಡ ಬೆನ್ನಲ್ಲೆ ಪವಿತ್ರಾ ಗೌಡ ತಾಯಿ ಕೂಡ ಪವಿತ್ರಾ ಮತ್ತು ಸ್ಯಾಮ್ ಮೇಲೆ ಗರಂ ಆಗಿದ್ದಾರಂತೆ.
