ಮುಂಬೈ: ಬಹುಕೋಟಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇದ್ದುಕೊಂಡೇ ಗೆಳತಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಾಲು ಸಾಲು ಪತ್ರ ಬರೆಯುತ್ತಲೇ ಇರುತ್ತಾನೆ. ಪ್ರೇಮಿಗಳ ದಿನಕ್ಕೊಂದು , ಹುಟ್ಟು ಹಬ್ಬಕ್ಕೂ ಒಂದು ಪತ್ರವನ್ನು ಸುಕೇಶ್ ಜಾಕ್ವೆಲಿನ್ ಕಳುಹಿಸಿದ್ದಾನೆ. ಇದೀಗ ಜೈಲಿನಿಂದ ಮತ್ತೊಂದು ಪತ್ರ ಬರೆದು 25 ಕೋಟಿಯ ಯೋಜನೆಯ ಉಡುಗೊರೆ ನೀಡಿದ್ದಾರೆ.
ನಟಿ ಜಾಕ್ವೆಲಿನ್ ಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿಯಂತೆ. ಅದರಲ್ಲೂ ನಾಯಿ, ಬೆಕ್ಕು, ಕುದುರೆಗಳು ಅಂದರೆ ಪ್ರಾಣವಂತೆ. ಪ್ರಾಣಿಪ್ರಿಯೆ ಗೆಳತಿಗೆ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಹೇಳಿದ್ದಾನೆ. ಇದೇ ಸೆಪ್ಟಂಬರ್ 11 ರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಲಿದ್ದು, ಮುಂದಿನ ವರ್ಷ ಆಗಸ್ಟ್ 11ಕ್ಕೆ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದ್ದಾನೆ.
ಇದು ಗೆಳತಿ ಹುಟ್ಟುಹಬ್ಬಕ್ಕಾಗಿ ಉಡುಗೊರೆ ಎಂದು ಹೇಳಿಕೊಂಡಿದ್ದಾನೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಒಟ್ಟು 25 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾನವಾಗಲಿದ್ದು, ಆಸ್ಪತ್ರೆಗಾಗಿ ಸುಕೇಶ್ 25 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದಾನೆ. ಈ ಆಸ್ಪತ್ರೆಯು ಉಚಿತವಾಗಿ ಕೆಲಸ ಮಾಡಲಿದೆ. ನುರಿತು ವೈದ್ಯರು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರಲಿದೆ ಎಂದು ಪತ್ರದಲ್ಲಿ ಬರೆದಿದ್ದಾನೆ.