ಜ್ಞಾನವನ್ನು ಕೊಡುವಂತಹ ಕೆಲಸವನ್ನು ಮೀಡಿಯಾಗಳು ಮಾಡುತ್ತವೆ.! ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ.!

ಚಿತ್ರದುರ್ಗ: ಜ್ಞಾನವನ್ನು ಕೊಡುವಂತಹ ಕೆಲಸವನ್ನು ಮೀಡಿಯಾಗಳು ಮಾಡುತ್ತವೆ.. ಅವುಗಳನ್ನು ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಾರೆ. ಸಮಾಜದಲ್ಲಿ ದೊಡ್ಡವರು ಕಾಣಿಸಿಕೊಳ್ಳುತ್ತಾರೆ ಆದರೆ ಅವರ ಹಿಂದೆ ಕೆಲಸ ಮಾಡುವವರು ಕಾಣಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಯಾವುದೇ ಕೆಲಸ ಕನಿಷ್ಠ ಅಲ್ಲ.. ಗರಿಷ್ಠ ಅಲ್ಲ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು.. ನಿಜವಾದ ಆರೋಗ್ಯವಂತರೆAದರೆ ವಿತರಕರು. ಏಕೆಂದರೆ ಅವರು ಬೆಳಗ್ಗೆ ಬೇಗ ಏಳುತ್ತಾರೆ… ಸೈಕಲ್ ತುಳಿಯುತ್ತಾರೆ. ಎಂದು ಶ್ರೀ ಸಾಣೇಹಳ್ಳಿ ಗುರುಪೀಠದ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ, ವಿತರಕರ ಸಂಘದ ವತಿಯಿಂದ ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ 4ನೇ ರಾಜ್ಯಮಟ್ಟದ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಭಗವಂತನು ಒಲಿದರೆ ಎಲ್ಲವೂ ಸಾಧ್ಯ. ಭಗವಂತ ಒಲಿದರೆ ಗೊಡ್ಡ ಹಸು ಸಹ ಹಾಲು ಕರಿಯುತ್ತೆ..ಅರಿವನ್ನು ಆಸ್ತಿಯನ್ನಾಗಿ ಮಾಡಿಕೊಂಡರೆ ಏನು ಬೇಕಾದರೂ ಮಾಡಲು ಸಾಧ್ಯ.ವಿತರಕರಿಗೆ ಮುಖ್ಯವಾಗಿ ಬೇಕಾಗಿರುವುದು ಒಂದು ವಾಹನ, ಒಂದು ನಿವೇಶನ ಹಾಗೂ ಅವರ ಮಕ್ಕಳಿಗೆ ಶಿಕ್ಷಣ.. ಇವುಗಳನ್ನು ಒದಗಿಸಲು ಕ್ರಮವಹಿಸಿದರೆ ವಿತರಕರು ನೆಮ್ಮದಿಯಿಂದ ಬದುಕುತ್ತಾರೆ.ಕಾಯಕ ಶ್ರದ್ದೆ ಯಾರಲ್ಲಿ ಇರುತ್ತೋ ಅವರು ಯಾವತ್ತೂ ಸೋಲಲ್ಲ ಅದಕ್ಕೆ ಉದಾಹರಣೆ ವಿಜಯ ಸಂಕೇಶ್ವರವರು ಎಂದರು.

 

Advertisement

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಗೋವಿಂದ ಕಾರಜೋಳ ಜನತಂತ್ರ ವ್ಯವಸ್ಥೆಯಲ್ಲಿ ನಿಜವಾದ ಪ್ರಮುಖ ಪಾತ್ರ ವಹಿಸುವವರು ಮುದ್ರಣ ಮಾಧ್ಯಮದವರು.ಹಾಲು ಹಾಕುವವರ, ಪೋಸ್ಟ್ಮ್ಯಾನ್‌ಗಳ ಸೇವೆಗಿಂತ ತ್ವರಿತವಾಗಿ ಪತ್ರಿಕಾ ವಿತರಕರು ಕೆಲಸ ಮಾಡುತ್ತಿದ್ದಾರೆ.ಪೋಸ್ಟ್ ಮ್ಯಾನ್‌ಗಳಿಗೆ ಹಲವು ಸವಲತ್ತುಗಳಿರುತ್ತವೆ ಯಾವುದೇ ಸವಲತ್ತುಗಳಿಲ್ಲದೆ ತ್ವರಿತವಾಗಿ ಸೇವೆಯನ್ನು ವಿತರಕರು ಮಾಡುತ್ತಾರೆ. ಈ ರಾಷ್ಟçದ ರಾಷ್ಟçಪತಿಗಳಾಗಿದ್ದ ಕಲಾಂ ರವರು ವಿತರಕರಾಗಿ ಕೆಲಸ ಮಾಡಿದ್ದಾರೆ… ಅಷ್ಟೇ ಅಲ್ಲದೆ ರಾಷ್ಟçದಲ್ಲಿ ಎಷ್ಟೋ ವಿದ್ಯಾರ್ಥಿಗಳು ಪತ್ರಿಕಾ ವಿತರಣೆ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದ ಅವರು ಪ್ರಸ್ತುತ ಈಗ ಎರಡು ರೀತಿಯ ಮಾಧ್ಯಮಗಳಿವೆ ಒಂದು ಅಸಲಿ ಇನ್ನೊಂದು ನಕಲಿ..  ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಅರಿಯಬೇಕಾಗಿದೆ ಎಂದರು.

 

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಮಾತನಾಡಿ,

ಸಿಎಂ ಮಾದ್ಯಮ ವಾಕ್ತರರು ಪ್ರಭಾಕರ್ ಮಾತನಾಡಿ, ಮನೆ ಮನೆಗೆ ಪತ್ರಿಕೆಗಳನ್ನ ತಲುಪಿಸುವ ಕಾಯಕ  ಪತ್ರಿಕಾ ವಿತರಕರು ಮಾಡುತ್ತ ಇದ್ದಾರೆ, ಕಾಂಗ್ರೆಸ್  ಸರ್ಕಾರದಿಂದ ಪತ್ರಿಕಟ ವಿತರಕರಿಗೆ ಎನು ಎನು ಸೌಲಭ್ಯಗಳು ಬೇಕೋ ಎಂಬುವುದರ ಬಗ್ಗೆ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿಯನ್ನ ನೀಡಲಾಗುವುದು  ವಿತರಕರಿಗೆ ಆರೋಗ್ಯ  ಯಾವಗಲ್ಲೂ ಚನ್ನಾಗಿ ಇರಲಿ ಅಂತ ಎಂದು ಆಶೀಸುವೆ  ವಿತರಕರ ಮಕ್ಕಳಿಗೆ ಆರೋಗ್ಯ ವ್ಯವಸ್ಥೆಯನ್ನು ಮಾಡಬೇಕಿದೆ ಅದೇ ರೀತಿಯಲ್ಲಿ ಕಡಿಮೆ ಬಡ್ಡಿ ಸಾಲದ ವ್ಯವಸ್ಥೆ ಮಾಡಬೇಕ ಎನ್ನುವುದರ ವಿತರಕ ಆಗ್ರಹವಾಗಿದೆ ಮುಂದಿನ ದಿನಗಳಲ್ಲಿ ಇವೆಲ್ಲವೂ ಆಗಲಿದೆ ಎಂದು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ  ಶ್ರೀ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್,  ಶಾಸಕರಾದ ಕೆ.ಸಿ ವೀರೇಂದ್ರ ಪಪ್ಪಿ,ವಿ.ಆರ್.ಎಲ್ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ್, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ನಾಗಣ್ಣ, ಹಿರಿಯ ಪತ್ರಿಕಾ ವಿತರಕರಾದ ಜನರಪ್ಪ, ರಾಜ್ಯಾಧ್ಯಕ್ಷರಾದ ಶಂಭುಲಿAಗಪ್ಪ, ಚಿತ್ರದುರ್ಗ ಜಿಲ್ಲಾ ಕಾರ್ಯನಿತರ ಪತ್ರಿಕಾ ಹಂಚಿಕೆದಾರರ ವಿತರಕ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ ಪೀರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಜಗದೀಶ್, ಐ.ಎಫ್,ಡಬ್ಲೂö್ಯ ಜೆಯ ಅಧ್ಯಕ್ಷರಾದ ಮಲ್ಲಿಕಾರ್ಜನ್, ಪ್ರಕಾಶ್ ನಾಯ್ಕ್, ನಾಗವೇಣಿ ಸೇರಿದಂತೆ ಇತರರು ಭಾಗವಹಿಸಿದ್ದರು.  ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಿಕಾ ವಿತರಕರು ಸೇರಿದಂತೆ ಸುಮಾರು 550-600 ಜನ ಭಾಗವಹಿಸಿದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement