‘ಟಾಕ್ಸಿಕ್’ ಮೂಲಕ ಯಶ್ ಗೆ ಜೋಡಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರಾ ಕರೀನಾ?

ಮುಂಬೈ: ಕೆಲವು ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಸಿನಿಮಾ ‘ಟಾಕ್ಸಿಕ್’ ನಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದ್ದು. ಇದೀಗ ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಕರೀನಾ ಕಪೂರ್ ಟೀಂ ಶೀಘ್ರವೇ ಎಗ್ಸೈಟಿಂಗ್ ಸಮಾಚಾರ ಹೇಳುತ್ತೇನೆ’ ಎಂದು ಎಕ್ಸ್ ನಲ್ಲಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಟಾಕ್ಸಿಕ್ ಚಿತ್ರವು ಯಶ್ ಅವರ 19 ನೇ ಚಿತ್ರವಾಗಿದೆ. ಅವರು ಕಳೆದ ತಿಂಗಳು ಟೈಟಲ್ ರಿಲೀಸ್ ಮಾಡಿದ್ದು ಮಾತ್ರವಲ್ಲದೆ, ಚಿತ್ರತಂಡ ಯಶ್ ಅವರ ಪಾತ್ರದ ಫಸ್ಟ್ ಲುಕ್ ನೀಡುವ ಕಿರು ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

ಈ ಸಿನಿಮಾವನ್ನು ಮಲಯಾಳಂನ ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ನಟಿಯ ಆಯ್ಕೆ ಮಾಡಿಕೊಳ್ಳಲು ತಂಡ ಮುಂದಾದರೇ ಕರೀನಾ ಕಪೂರ್ ಖಾನ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವ ಮೂಲಕ ಇದುವೇ ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ.

Advertisement

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ಕರೀನಾ ಕಪೂರ್ ಟೀಂ ಅರೆಬರೆ ಗೊತ್ತಿರುವ ವಿಚಾರ ಪ್ರಕಟಿಸಬೇಡಿ. ಶೀಘ್ರವೇ ಎಗ್ಸೈಟಿಂಗ್ ವಿಚಾರ ಬರಲಿದೆ. ಅಧಿಕೃತ ಘೋಷಣೆಗಾಗಿ ಕಾಯಿರಿ’ ಎಂದು ವದಂತಿಗಳಿಗೆ ತೆರೆ ಎಳೆದಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement