ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಏರ್ಲೈನ್ ಹೊಸ ಲೋಗೋ ಮತ್ತು ವಿನ್ಯಾಸದೊಂದಿಗೆ ತನ್ನ ವಿಮಾನದ ಚಿತ್ರವನ್ನು ಅನಾವರಣಗೊಳಿಸಿದೆ. ಏರ್ಲೈನ್ಸ್ ಈ ವರ್ಷದ ಆರಂಭದಲ್ಲಿ ಹೊಸ ಲೋಗೋ ದಿ ವಿಸ್ಟಾನೊಂದಿಗೆ ರಿಬ್ರಾಂಡ್ ಮಾಡಿಕೊಂಡಿತ್ತು. ವಿಮಾನದ ಮಾಲೀಕತ್ವದ ಬದಲಾವಣೆಯ ನಂತರ ಏರ್ಲೈನ್ನ ವಿನ್ಯಾಸ ಬದಲಾಯಿಸುವ ಯೋಜನೆ ಪ್ರಾರಂಭಿಸಲಾಯ್ತು. ಫ್ರಾನ್ಸ್ನ ಟೌಲೌಸ್ನ ಏರ್ಬಸ್ನ ಹೊಸ ಎ350 ವಿಮಾನದ ಚಿತ್ರವನ್ನು ಸಂಸ್ಥೆಯು ಟ್ವಿಟ್‌ನಲ್ಲಿ ಹಂಚಿಕೊಂಡಿದೆ. ಚಳಿಗಾಲದಲ್ಲಿ ವಿಮಾನ ಭಾರತಕ್ಕೆ ಆಗಮಿಸಲಿದೆ ಎಂದು ಸಂಸ್ಥೆ ಹೇಳಿದೆ. ಇದೀಗ ಫ್ರಾನ್ಸ್ನ ಟೌಲೌಸ್ನಲ್ಲಿರುವ ಎ350 ವಿಮಾನವು ಗೋಲ್ಡನ್, ಕೆಂಪು ಮತ್ತು ನೇರಳೆ ಸೇರಿದಂತೆ ಹೊಸ ಬಣ್ಣಗಳನ್ನು ಒಳಗೊಂಡಿದೆ. ಅದರ ಮರುಬ್ರಾಂಡಿಂಗ್ ಪ್ರಯತ್ನದ ಭಾಗವಾಗಿ ಏರ್ ಇಂಡಿಯಾ ಆಗಸ್ಟ್ನಲ್ಲಿ ತನ್ನ ಹೊಸ ಲೋಗೋ ಮತ್ತು ಬಣ್ಣದ ಪ್ಯಾಲೆಟ್ ಅನ್ನು ಘೋಷಿಸಿತ್ತು. ಹೊಸ ಲೋಗೋ ಹೆಚ್ಚು ಶೈಲಿಕೃತ ಮತ್ತು ಹೊಸ ಬಣ್ಣದ ವಿನ್ಯಾಸವನ್ನು ಒಳಗೊಂಡಿದೆ.