ಭೋಪಾಲ್: ಮಧ್ಯಪ್ರದೇಶದ ಮಾಜಿ ಸಚಿವ ರುಸ್ತಮ್ ಸಿಂಗ್ ಅವರು ಬಿಜೆಪಿ ಜತೆಗಿನ ಹಲವು ವರ್ಷಗಳ ನಂಟು ಕಡಿದುಕೊಂಡು ಬಿಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ.
ರುಸ್ತಮ್ ಸಿಂಗ್ ಅವರು ಎರಡು ಬಾರಿ ಪ್ರತಿನಿಧಿಸಿದ್ದ ಮೊರೇನಾ ಕ್ಷೇತ್ರದಿಂದ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಸಿಂಗ್ ಈ ಕ್ರಮ ಕೈಗೊಂಡಿದ್ದಾರೆ.
ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಮಾತನಾಡಿ, ರುಸ್ತಮ್ ಸಿಂಗ್ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಬಿಜೆಪಿ ಅವರಿಗೆ ದೊಡ್ಡ ಅವಕಾಶಗಳನ್ನು ನೀಡಿದೆ. ಇಷ್ಟಾಗಿಯೂ, ಒಬ್ಬ ವ್ಯಕ್ತಿ ತಾನು ಬೇರೆಡೆ ಅವಕಾಶ ಪಡೆಯಬಲ್ಲೆ ಎಂದು ಭಾವಿಸಿದರೆ ಅದು ಒಳ್ಳೆಯದು ಎಂದಿದ್ದಾರೆ.