ಕೋಲಾರ: ಏಷ್ಯಾದ ಅತೀ ದೊಡ್ಡ ಎರಡನೇ ಟೊಮ್ಯಾಟೊ ಮಾರುಕಟ್ಟೆಯಾಗಿರುವ ಕೋಲಾರದಲ್ಲಿ ಇದೀಗ ಭಾರೀ ಭದ್ರತೆ ಒದಗಿಸಲಾಗಿದೆ.
ಟೊಮ್ಯಾಟೊ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೆಜಿಗೆ ₹200ರ ಗಡಿ ದಾಟುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲಾರದಲ್ಲಿರುವ ಅತೀ ದೊಡ್ಡ ಟೊಮ್ಯಾಟೊ ಮಾರುಕಟ್ಟೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಅಲ್ಲದೆ, ಮಾರುಕಟ್ಟೆಯ ಆವರಣದಲ್ಲಿ ಸಿಸಿ ಟಿವಿ ಸಹ ಅಳವಡಿಸಲಾಗಿದೆ. ಅಹಿತಕರ ಘಟನೆಯಾಗದಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿನ ಎಸ್ಪಿ ನಾರಾಯಣ ಹೇಳಿದ್ದಾರೆ.