ವಾಷಿಂಗ್ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಹತ್ಯೆ ಯತ್ನವನ್ನು ತಡೆಯುವಲ್ಲಿ ಸಂಸ್ಥೆ ವಿಫಲವಾಗಿದೆ ಎಂದು ಒಪ್ಪಿಕೊಂಡ ಯುಎಸ್ ಸೀಕ್ರೆಟ್ ಸರ್ವಿಸ್ ಡೈರೆಕ್ಟರ್ ಕಿಂಬರ್ಲಿ ಚೀಟಲ್ ರಾಜೀನಾಮೆ ನೀಡಿದ್ದಾರೆ.
ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ 20 ವರ್ಷದ ಬಂದೂಕುಧಾರಿ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಮೇಲೆ ದಾಳಿ ನಡೆಸಿದ್ದ. ಇದರಿಂದ ಟ್ರಂಪ್ ಕಿವಿಗೆ ಗಾಯವಾಗಿತ್ತು. ಈ ದಾಳಿಯನ್ನು ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಗುಪ್ತಚರ ದಳದ ನಿರ್ದೇಶಕಿ ರಾಜೀನಾಮೆ ನೀಡಿದ್ದಾರೆ. ಯುಎಸ್ ಅಧ್ಯಕ್ಷರ ರಕ್ಷಣೆಗೆ ಜವಾಬ್ದಾರರಾಗಿರುವ ರಹಸ್ಯ ಸೇವೆ ಇದಾಗಿದೆ.