ಬೆಂಗಳೂರು: ಪದೇಪದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುತ್ತಿರು ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದು ಪಡಿಸುವಂತೆ ಮಾಡುವಂತೆ ಟ್ರಾಫಿಕ್ ಪೊಲೀಸ್ ಇಲಾಖೆ ಕಳೆದ ತಿಂಗಳಷ್ಟೇ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದ್ದು ಈಗ ಅತೀ ಹೆಚ್ಚು ದಂಡ ಹೊಂದಿದವರ ವಾಹನ ಸವಾರರ ಮನೆಗೆ ಟ್ರಾಫಿಕ್ ಪೊಲೀಸರು ಬಂದು ದಂಡದ ಹಣ ವಸೂಲಿ ಮಾಡಲಿದ್ದಾರೆ.
ನಿಮ್ಮ ವಾಹನವು ಸುಮಾರು 50 ಸಾವಿರಕ್ಕೂ ಅಧಿಕ ದಂಡದ ಹೊಂದಿದ್ದರೆ ಮಾತ್ರ ಪೊಲೀಸರು ಮನೆಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ.
ರಾಜ್ಯದಲ್ಲಿ ಸುಮಾರು 2300 ಕ್ಕೂ ಅಧಿಕ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಹೊಂದಿದ್ದು, ಈಗಾಗಲೇ ಹಲವು ವಾಹನ ಮಾಲೀಕರಿಂದ ದಂಡ ಸಂಗ್ರಹ ಮಾಡಲಾಗಿದೆ. ದಂಡ ಕಟ್ಟದಿದ್ದರೆ ಅಂತಹ ವಾಹನ ಸವಾರರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದು, ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಲಿದೆ.