ದೇವನಹಳ್ಳಿ : ವಿದೇಶದಿಂದ ಬೆಂಗಳೂರಿಗೆ ವನ್ಯಜೀವಿಗಳ ಸ್ಮಗ್ಲಿಂಗ್ ಮಾಡುತ್ತಿದ್ದ ಜಾಲವನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದು, ಟ್ರ್ಯಾಲಿ ಬ್ಯಾಗ್ ನಲ್ಲಿ ಮರೆಮಾಚಿ ಕಳ್ಳಸಾಗಣಿಕೆಗೆ ಯತ್ನಸಿದ ಎರಡು ಪ್ರಕರಣಗಳಲ್ಲಿ 40 ವನ್ಯಜೀವಿಗಳ ಸಂರಕ್ಷಣೆಯನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮಾಡಿದ್ದಾರೆ. ನವೆಂಬರ್ 12ರಂದು ಕೌಲಾಲಂಪುರದಿಂದ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ ಸಂಖ್ಯೆ MH0192ರಲ್ಲಿ ಬಂದ ಪ್ರಯಾಣಿಕರು ಕಳ್ಳಸಾಗಣೆ ಮಾಡುತ್ತಿರುವ ಗುಪ್ತಚಾರ ಮಾಹಿತಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂದಿದ್ದು, ಇಬ್ಬರು ಪ್ರಯಾಣಿಕರನ್ನ ವಿಚಾರಣೆ ಮಾಡಿ ಅವರ ಟ್ರ್ಯಾಲಿ ಬ್ಯಾಗ್ ಗಳನ್ನ ಪರಿಶೀಲನೆ ಮಾಡಿದ್ದಾಗ ವನ್ಯಜೀವಿಗಳ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಟ್ರಾಲಿ ಬ್ಯಾಗ್‌ಗಳಲ್ಲಿ ಮರೆಮಾಚಿ ಒಟ್ಟು 40 ವನ್ಯಜೀವಿ ಪ್ರಾಣಿಗಳನ್ನ ಕಳ್ಳಸಾಗಣೆ ಪ್ರಯತ್ನ ಮಾಡಲಾಗಿದ್ದು, ಒಂದರಲ್ಲಿ ಅಲ್ಡಾಬ್ರಾ ದೈತ್ಯ ಆಮೆಗಳು, ಕೆಂಪು ಕಾಲಿನ ಆಮೆಗಳು, ಹಲ್ಲಿಗಳು, ಶಿಂಗಲ್‌ಬ್ಯಾಕ್ ಸ್ಕಿಂಕ್‌ಗಳು, ಜುವೆನೈಲ್ ಘೇಂಡಾಮೃಗ ಇಗುವಾನಾಗಳು, ಅಲ್ಬಿನೋ ಬ್ಯಾಟ್ ಸೇರಿದಂತೆ 24 ಪ್ರಾಣಿಗಳು ಮತ್ತು ಎರಡನೇ ಬ್ಯಾಗ್ ನಲ್ಲಿ ಲುಟಿನೊ ಇಗುವಾನಾ, ಅಗೈಲ್ ಗಿಬ್ಬನ್, ಬೇಬಿ ಅಮೇರಿಕನ್ ಅಲಿಗೇಟರ್‌ಗಳು, ಮರಿ ಚಿರತೆ ಆಮೆಗಳು, ಕೆಂಪು ಕಾಲಿನ ಆಮೆ ಸೇರಿದಂತೆ 16 ಜೀವಿಗಳು ಪತ್ತೆಯಾಗಿವೆ, ಎಲ್ಲಾ ಜೀವಿಗಳು ಜೀವಂತ ಸ್ಥಿತಿಯಲ್ಲಿವೆ. ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿಯಲ್ಲಿ ವನ್ಯಜೀವಿಗಳ ಜಪ್ತಿ ಮಾಡಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಇಬ್ಬರು ಪ್ರಯಾಣಿಕರನ್ನ ಬಂಧಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.