ಬೆಂಗಳೂರು : ಕನ್ನಡದ ಪ್ರಖ್ಯಾತ ಯುಟ್ಯೂಬರ್ ಡಾ. ಬ್ರೋ ಮಿಸ್ಸಿಂಗ್ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಾಣುತ್ತಿದ್ದು, ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಕನ್ನಡದ ಮತ್ತೆ ಇಬ್ಬರು ಯುಟ್ಯೂಬರ್ ಜೊತೆ ಶೃಂಗೇರಿ ಕಡೆ ಪ್ರವಾಸಕ್ಕೆ ತೆರಳಿದ್ದಾರೆ.
ನಮಸ್ಕಾರ ದೇವ್ರೋ ಎಂದು ತಮ್ಮ ವ್ಲಾಗ್ ಆರಂಭಿಸುವ ಡಾ.ಬ್ರೋ ಕಳೆದ ನವೆಂಬರ್ 29 ರಂದು ವಿಡಿಯೋ ಹಂಚಿಕೊಂಡಿದ್ದೇ ಕೊನೆ ಅಲ್ಲಿಂದ ಇಲ್ಲಿವರೆಗೆ ಒಂದೇ ಒಂದು ಅಪ್ಡೇಟ್ ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ನಿಂದ ಹೊರಬಂದಿಲ್ಲ.
ಇದು ಅವರ ಫಾಲೋವರ್ಸ್‌ಗೆ ಚಿಂತೆಗೆ ಕಾರಣವಾಗಿತ್ತು. ಚೀನಾವನ್ನು ಹೊಗಳಿದ್ದರಿಂದ ಅವರಿಗೆ ಕೆಲವರು ದೇಶದ್ರೋಹಿ ಪಟ್ಟ ಕಟ್ಟಿದ್ದರು. ಹೀಗಾಗಿ ಡಿಪ್ರೆಷನ್‌ಗೆ ಹೋಗಿದ್ದಾರೆ ಅಂತೆಲ್ಲ ಸುದ್ದಿಯಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಮತ್ತೊಬ್ಬ ಪ್ರಸಿದ್ಧ ಯೂಟ್ಯೂಬರ್ ಗ್ಲೋಬಲ್ ಕನ್ನಡಿಗ ಉತ್ತರ ನೀಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗ್ಲೋಬಲ್ ಕನ್ನಡಿಗ ಯೂಟ್ಯೂಬರ್ ನಟ ಮಹಾಬಲ ರಾಮ್ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮಗದೊಂದು ಪ್ರಸಿದ್ಧ ಯೂಟ್ಯೂಬ್ ಚಾನೆಲ್ ಫ್ಲೈಯಿಂಗ್ ಪಾಸ್‌ಪೋರ್ಟ್ (ಆಶಾ-ಕಿರಣ್) ಮತ್ತು ಡಾ.ಬ್ರೋ ಜೊತೆಗೆ ಒಂದು ದಿನದ ಟ್ರಿಪ್ ಹೋದ ಬಗ್ಗೆ ಹಾಕಿಕೊಂಡಿದ್ದಾರೆ. ಈ ನಡುವೆ ಮೂವರು ಯೂಟ್ಯೂಬರ್ಸ್ ತಮ್ಮ ಟ್ರಾವೆಲ್ ಮುಗಿಸಿಕೊಂಡು ಒಂಡೆದೆ ಸೇರಿ ಶೃಂಗೇರಿ, ಆಗುಂಬೆ ಕಡೆ ಟ್ರಿಪ್ ಹೋಗಿದ್ದಾರೆ. ಎರಡು ದಿನಗಳ ಕಾಲ ದೇವಾಲಯಗಳು, ವೈವಿದ್ಯಮಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೋದಾಗ 4 ಜನರಿಗೂ ಸಿನೆಮಾ ಸ್ಟಾರ್ ತರ ಸ್ವಾಗತ ದೊರೆಯಿತೆಂದು ಎಂದು ಗ್ಲೂಬಲ್ ಕನ್ನಡಿಗ ವಿವರಿಸಿದ್ದಾರೆ. ಡಾ. ಬ್ರೋ ಫ್ಯಾನ್ಸ್ ಗಾಡಿ ನಿಲ್ಲಿಸಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.