ಬೆಂಗಳೂರು : ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಕಿದ ಸವಾಲನ್ನು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ. “ಪಲಾಯನವಾದಿ ನಾನಲ್ಲ, ನನ್ನ ಬಳಿಯೂ ಸಾಕಷ್ಟು ಸರಕು ಇದೆ” ಎಂದು ಹೇಳಿ ಎಂದು ಹೊಸ ಬಾಂಬ್ ಸಿಡಿಸಿಸುವ ಮೂಲಕ ರಾಜಕೀಯ ಕದನಕ್ಕೆ ನಾಂದಿ ಹಾಡಿದ್ದಾರೆ.
ಬೆಂಗಳೂರಿಗೆ ಕನಕಪುರವನ್ನು ಸೇರ್ಪಡೆ ಮಾಡುವ ಬಗ್ಗೆ ಜನರ ಅಭಿಪ್ರಾಯ ಕೇಳುತ್ತಿದ್ದೇನೆ. ನಾವು ಬೆಂಗಳೂರಿನವರು, ಬೆಂಗಳೂರಲ್ಲೇ ಇರಬೇಕು. ರಾಮನಗರ ಛಿದ್ರ ಮಾಡಿದವರು ನಾವಲ್ಲ. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ ಬನ್ನಿ ಚರ್ಚೆ ಮಾಡೋಣ. ಯಾವುದೇ ಮಾಧ್ಯಮದ ವೇದಿಕೆಗೆ ಬಂದರೂ ಸರಿ ಎಂದು ಮಾಜಿ ಸಿಎಂ ಹೆಚ್.ಡಿ.ಕೆ ಹೇಳಿಕೆಗೆ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ತಿರುಗೇಟು ನೀಡಿ ಡಿಕೆಶಿ ಸವಾಲು ಹಾಕಿದ್ದರು.
ನಾನು ಚರ್ಚೆಗೆ ಸಿದ್ದನಿದ್ದು ಸವಾಲು ಸ್ವೀಕಾರ ಮಾಡುತ್ತೇನೆ. ಪಲಾಯನ ಮಾಡಲ್ಲ. ನನ್ನ ಹತ್ತಿರ ಸಹ ಸರಕು ಇದೆ. ಇಂದಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಕಾರಣ ಎಂದು ಆರೋಪಿಸಿ, ಶ್ವೇತ ಪತ್ರ ಹೊರಡಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಸ್ವಾಗತ ಮಾಡುತ್ತೇನೆ. ಅವರು ಕೊಟ್ಟಂತಹ ತೀರ್ಮಾನಗಳ ಆದಾರದ ಮೇಲೆ ಬಿಜೆಪಿ ಸರ್ಕಾರ ನಡೆದಿದೆ ಎಂದು ಹೇಳಿದ್ದಾರೆ
ಇದೇ ವೇಳೆ ಕುಮಾರಸ್ವಾಮಿ ಮತ್ತೊಂದು ಸವಾಲು ಮುಂದಿಟ್ಟಿದ್ದು,ಕಳೆದ ಐದು ತಿಂಗಳಲ್ಲಿ ವರ್ಗಾವಣೆ ದಂಧೆ ಮಾಡಿ ಯಾವುದೇ ಹಣ ಪಡೆದಿಲ್ಲ ಎಂದು ಸಿಎಂ, ಡಿಸಿಎಂ ಹಾಗೂ ಎಲ್ಲಾ ಮಂತ್ರಿಗಳು ಬಂದು ಪ್ರಮಾಣ ಮಾಡಲಿ. ನಾನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಧರ್ಮಸ್ಥಳ ಬೇಡ ಅಂದ್ರೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗೋಣ ಬನ್ನಿ ಎಂದು ಹೆಚ್ ಡಿಕೆ ಗುಡುಗಿದ್ದಾರೆ.