ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಬಡತನ ನಿರ್ಮೂಲನೆ ಮತ್ತು ಆರ್ಥಿಕತೆಯಲ್ಲಿ ಶತಕೋಟಿ ಜನರನ್ನು ಸೇರಿಸುವಲ್ಲಿ ಭಾರತದ ಸಾಧನೆಯನ್ನು ಶ್ಲಾಘಿಸಿದರು.
ಈ ಬಗ್ಗೆ ಮಾತನಾಡಿ, ಡಿಜಿಟಲೀಕರಣವನ್ನು ಭಾರತ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಡಿಜಟಲೀಕರಣವು ಉತ್ಪಾದಕತೆ ಹೆಚ್ಚಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆರ್ಥಿಕತೆಯನ್ನು ಸಮರ್ಥವಾಗಿಸಲು ಸಹಾಯ ಮಾಡುತ್ತದೆ.
ಮಹಿಳೆಯರು, ರೈತರು ಇದ್ದ ಕಡೆಯಿಂದ ಹಣ ಪಾವತಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.