ಕಳೆದ ಜುಲೈ ತಿಂಗಳಲ್ಲಿ ತಮ್ಮ ಪತಿಗೆ ವಿಚ್ಛೇದನ ಘೋಷಿಸಿದ್ದ ದುಬೈ ರಾಜಕುಮಾರಿ ಶೇಖಾ ಮಹ್ರಾ ಅವರು ‘ಡಿವೋರ್ಸ್’ ಎಂಬ ಸುಗಂಧ ದ್ರವ್ಯದ ಬಾಟಲಿಯನ್ನು ತಮ್ಮ ಇನ್ಸ್ಟ್ರಾಗ್ರಾಂ ಖಾತೆ ಮೂಲಕ ಬಿಡುಗಡೆ ಮಾಡಿದ್ದಾರೆ. “ಆತ್ಮೀಯ ಪತಿ, ನೀವು ಇತರರೊಂದಿಗೆ ನಿರತರಾಗಿರುವ ಕಾರಣ, ನಾನು ಈ ಮೂಲಕ ನಮ್ಮ ವಿಚ್ಛೇದನವನ್ನು ಘೋಷಿಸುತ್ತೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತೇನೆ, ನಾನು ನಿಮಗೆ ವಿಚ್ಛೇದನ ನೀಡುತ್ತೇನೆ ಮತ್ತು ನಾನು ನಿಮಗೆ ವಿಚ್ಛೇದನ ನೀಡುತ್ತೇನೆ ಎಂದು ಮೂರು ಬಾರಿ ಹೇಳಿ ನೀವು ಕಾಳಜಿ ವಹಿಸಿ. ನಿಮ್ಮ ಮಾಜಿ ಪತ್ನಿ” ಎಂದು ಅವರು ಈ ಹಿಂದಿನ ಪೋಸ್ಟ್ನಲ್ಲಿ ಹಾಕಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.