ರಾಯಚೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂಪೂರ್ಣವಾಗಿ ತಪ್ಪಿತಸ್ಥರಿದ್ದಾರೆ. ಹಾಗಾಗಿ ಡಿಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ಕೊಡಬೇಕು ಎಂದು ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರು ಅಕ್ರಮ ದುಡ್ಡು ಹೊಡೆದಿದ್ದು, ಅವರು ಡಿಸಿಎಂ ಸ್ಥಾನದಲ್ಲಿ ಇರಬಾರದು. ತಕ್ಷಣ ರಾಜೀನಾಮೆ ಕೊಡಬೇಕು. ಕೋರ್ಟ್ ಹೇಳಿದೆ ಮೂರು ತಿಂಗಳಲ್ಲಿ ತನಿಖೆ ಆಗಬೇಕು. ಆ ಬಳಿಕ ಮಂತ್ರಿ ಆಗಿ, ಇಲ್ಲ ಜೈಲಿಗೆ ಹೋಗಿ ಎಂದರು.
ಇನ್ನು ಡಿಕೆಶಿ ಅವರ ಮನೆಯಲ್ಲಿ ಸಿಕ್ಕ ಬಂಡಲ್ ಗಟ್ಟಲೇ ನೋಟನ್ನು ನಾವು ಟಿವಿಯಲ್ಲೇ ನೋಡಿದ್ದು ಅದಕ್ಕಿಂತ ಸಾಕ್ಷಿಬೇಕಾ?. ಬಾಕ್ಸ್‍ಗಟ್ಟಲೇ ದಾಖಲೆ ಬಂತು ಅದಕ್ಕಿಂತ ದಾಖಲೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.