ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಈ ಪ್ರಕರಣ ಸಂಬಂಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೆರವು ಕೋರಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಈ ಸಂಕಷ್ಟದಿಂದ ಪಾರು ಮಾಡುವ ಕುರಿತಾಗಿ ವಿಜಯಲಕ್ಷ್ಮಿ ಅವರು ದರ್ಶನ್ ಸಹೋದರ ತೂಗುದೀಪ ದಿನಕರ್ ಹಾಗೂ ನಟ ಜೋಗಿ ಪ್ರೇಮ್ ಅವರೊಂದಿಗೆ ಡಿಕೆಶಿ ಮನೆ ಬಂದಿದ್ದಾರೆ. ಡಿಕೆಶಿ ಅವರ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ್ದು, ದರ್ಶನ್ ಕೊಲೆ ಆರೋಪದ ಕೇಸ್ ಸಂಬಂಧ ಕುಟುಂಬಸ್ಥರು ಮಾತುಕತೆ ನಡೆಸಲಿದ್ದಾರೆ.
