ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರದು ಎಂಬಂತೆ ಬಿಂಬಿಸಲಾದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಸ್ತವ ಪರಿಶೀಲನೆ ನಂತರ ಇದು ‘ಡೀಪ್ ಫೇಕ್’ ವಿಡಿಯೋ ಎಂಬುದು ಗೊತ್ತಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಉದ್ಯಮಶೀಲತೆ ಮತ್ತು ಕೌಶಲ್ಯಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್, ಇದು ಅತ್ಯಂತ ಅಪಾಯಕಾರಿ ಹಾಗೂ ಮಾನಹಾನಿಕರ. ಇಂತಹ ಕೃತ್ಯಗಳಲ್ಲಿ ತೊಡಗುವವರು ಗಂಭೀರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂಟರ್‌ನೆಟ್ ಬಳಸುವ ಎಲ್ಲ ನೆಟ್ಟಿಗರು ಮೊದಲು ತಮ್ಮ ಎಲ್ಲ ಖಾತೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಮಾನಹಾನಿಕರ ವಿಡಿಯೋ, ಫೋಟೋ ಅಥವಾ ವಿಷಯ ಹಂಚಿಕೆ ಆಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಪೋಸ್ಟ್ ಆಗಿರುವ ಕಂಟೆಂಟ್‌ಗೆ ಸರಕಾರದಿಂದ ಆಕ್ಷೇಪ ಬಂದಲ್ಲಿ ಅದನ್ನು 36 ಗಂಟೆಗಳ ಒಳಗಾಗಿ ಡಿಲಿಟ್ ಆಗುವಂತೆ ನೋಡಿಕೊಳ್ಳಬೇಕು. ಇಲ್ಲಿದಿದ್ದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಅನಿವಾರ್ಯವಾಗುವುದು ಎಂದು ರಾಜೀವ್ ಚಂದ್ರಶೇಖರ್ ಎಚ್ಚರಿಸಿದ್ದಾರೆ.