ಡ್ರಗ್ಸ್ ಪ್ರಕರಣ -ಅ.10ಕ್ಕೆ ವಿಚಾರಣೆಗೆ ಹಾಜರಾಗಲು ನಟ ನವದೀಪ್‌ಗೆ ನೋಟಿಸ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಿಗ್ರಹ ದಳದ ಅಧಿಕಾರಿಗಳು ನವದೀಪ್ ಗೆ ನೋಟಿಸ್ ಜಾರಿ ಮಾಡಿದ್ದು, ಇದೀಗ ಜಾರಿ ನಿರ್ದೇಶನಾಲಯ (ಇಡಿ) ಅಕ್ಟೋಬರ್ 10ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.

ಮಾದಾಪುರ ಡ್ರಗ್ಸ್ ಕೇಸ್ ನ 37ನೇ ಆರೋಪಿ ಆಗಿದ್ದ ನವದೀಪ್ ಬಂಧನಕ್ಕೆ ಅಧಿಕಾರಿಗಳು ಬಲೆ ಬೀಸಿದ್ದು, ಈ ವಿಷಯ ತಿಳಿಯುತ್ತಿದ್ದಂತೆಯೇ ಈಗಾಗಲೇ ವಿಚಾರಣೆಗೂ ಒಳಗಾಗಿರುವ ನವದೀಪ್‍ ತಲೆಮರೆಸಿಕೊಂಡಿದ್ದರು.

ಇನ್ನು ಜೊತೆಗೆ ತೆಲಂಗಾಣ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಕೂಡ ಸಲ್ಲಿದ್ದರು.

Advertisement

ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮಾನ್ಯ ತೆಲಂಗಾಣ ಉಚ್ಛ ನ್ಯಾಯಾಲಯವು ಬಲವಂತವಾಗಿ ನವದೀಪ್ ಅವರನ್ನು ಬಂಧಿಸುವಂತಿಲ್ಲ ಎಂದು ಆದೇಶ ನೀಡಿದೆ.

ಈ ಹಿಂದೆ ಹೋಟೆಲ್ ವೊಂದರ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ನಿರ್ಮಾಪಕನೂ ಸೇರಿದಂತೆ ಹಲವರನ್ನು ಬಂಧಿಸಿದ್ದು ಈ ವೇಳೆ ನವದೀಪ್ ಕೂಡ ಇದ್ದಾರೆ ಎಂದು ಹೇಳಲಾಗಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement