ಜೆರುಸೆಲಂ: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಡಿ. 15 ಇಸ್ರೇಲ್ ಸೇನೆಯು ಆಕಸ್ಮಿಕವಾಗಿ ತನ್ನದೇ ದೇಶದ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದಿದೆ. ಇಸ್ರೇಲ್ ರಕ್ಷಣಾ ಪಡೆ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಸ್ರೇಲಿ ಸೈನಿಕರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ತಮಗೆ ಅಪಾಯ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಮತಪಟ್ಟವರನ್ನು ಸಮರ್ ತಲಲ್ಕಾ (22), ಯೋಟಮ್ ಹೈಮ್ (28), ಮತ್ತು ಅಲೋನ್ ಶಮ್ರಿಜ್ (26) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಮಾರಣಾಂತಿಕ ದಾಳಿಯನ್ನು ನಡೆಸಿತು. ಇಲ್ಲಿಯವರೆಗೆ ಇಸ್ರೇಲಿ ಅಧಿಕಾರಿಗಳು ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದಾರೆ. ಅವರ ಪೈಕಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ ಎಂದು ತಿಳಿದುಬಂದಿದೆ.
ಹಮಾಸ್ ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಅಂದಾಜು 250 ಒತ್ತೆಯಾಳುಗಳನ್ನು ವಾಪಸ್ ಕರೆತರುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್, ಭಾರಿ ಆಕ್ರಮಣ ನಡೆಸಿದೆ. ಇಸ್ರೇಲ್ ಸೇನೆ ಮುತ್ತಿಗೆ ಹಾಕಿದ ಹೆಚ್ಚಿನ ಪ್ರದೇಶವನ್ನು ನಾಶಮಾಡಿದೆ.
ಅಕ್ಟೋಬರ್ 7 ರಿಂದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 18,787 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ ಸುಮಾರು 1,200 ಏರಿಕೆಯಾಗಿದೆ.