ತರಬೇತಿ ಪಡೆಯದೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಲ್ಲವಿ ಮಿಶ್ರಾ

WhatsApp
Telegram
Facebook
Twitter
LinkedIn

ದೆಹಲಿ : ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್‌ಸಿ ಕೂಡ ಒಂದು. ಈ ಪರೀಕ್ಷೆಯನ್ನು ತರಬೇತಿ ಪಡೆಯದೇ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಹೀಗೆ ತರಬೇತಿ ಪಡೆಯದೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಲ್ಲವಿ ಮಿಶ್ರಾ ಅವರ ಯಶೊಗಾಥೆ ಇದು.

ಪಲ್ಲವಿ ಮಿಶ್ರಾ ಅವರ ತಂದೆ ಅಜಯ್ ಮಿಶ್ರಾ ಹಿರಿಯ ವಕೀಲರಾಗಿದ್ದು, ಆಕೆಯ ತಾಯಿ ಡಾ. ರೇಣು ಮಿಶ್ರಾ ಹಿರಿಯ ವಿಜ್ಞಾನಿ. ಆಕೆಯ ಹಿರಿಯ ಸಹೋದರ ಆದಿತ್ಯ ಮಿಶ್ರಾ ಅವರು ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಇಂದೋರ್‌ನ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಲ್ಲವಿ ಮಿಶ್ರಾ ತಮ್ಮ ಶಾಲಾ ಶಿಕ್ಷಣವನ್ನು ಭೋಪಾಲ್‌ನಲ್ಲಿ ಪೂರ್ಣಗೊಳಿಸಿದರು ಮತ್ತು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅವರು ಕಾನೂನು ಅಧ್ಯಯನದ ಜೊತೆಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಪಲ್ಲವಿ ಅವರು ಕಾನೂನು ಪದವಿ ಪಡೆದ ನಂತರ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಮತ್ತು ಇದೀಗ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದಾರೆ.

ನಂತರ ಪಲ್ಲವಿ ಮಿಶ್ರಾ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಪಲ್ಲವಿ ಅವರು ಯಾವುದೇ ತರಬೇತಿಯನ್ನು ಪಡೆಯದೇ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಬಳಿಕ ಎರಡನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 73 ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon