ಹುಬ್ಬಳ್ಳಿ : ನಿನ್ನೆ (ಗುರುವಾರ) ಹೆಣ್ಣು ಮಗುವಿನ ಮೇಲೆ ಅಮಾನುಷವಾಗಿ ಬರ್ಬರ ಹತ್ಯೆ ಮಾಡಲಾಗಿದೆ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಬೇಜಾವಾಬ್ದಾರಿಯುತ ಹೇಳಿಕೆ ನೀಡ್ತಾರೆ, ಗೃಹ ಸಚಿವರಿಗೆ ಮಾನ ಮರ್ಯಾದೆ ಇದೆಯಾ ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಉದ್ದೇಶಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇಹಾ ಕೊಲೆ ಘಟನೆ ಬಗ್ಗೆ ಯಾವುದೇ ಮಾಹಿತಿ ತೆಗೆದುಕೊಳ್ಳದೇ ಗೃಹ ಸಚಿವರು ಈ ರೀತಿ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ಇದೆ, ವೋಟ್ ಬ್ಯಾಂಕ್ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಘಟನೆಗಳು ನಡೆದ್ರೆ ರಕ್ಷಣೆ ಮಾಡೋರ‌್ಯಾರು ? ಎಂದಿದ್ದಾರೆ. ನಿಮಗೆ ತಾಕತ್ ಇದ್ರೆ ಇಂತವರನ್ನ ಎನ್ ಕೌಂಟರ್ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ. ನೇಹಾ ಕುಟುಂಬಸ್ಥರ ಜೊತೆ ನಾವೂ ಕೂಡ ಕಾನೂನು ಹೋರಾಟ ಮಾಡುತ್ತೇವೆ. ಆರೋಪಿಗೆ ಮೂರು ತಿಂಗಳಲ್ಲಿ ಶಿಕ್ಷೆ ನೀಡಬೇಕು ಅನ್ನೋದು ಸುಪ್ರೀಂಕೋರ್ಟ್ ನಿಯಮ ಇದೆ, ಮೂರು ತಿಂಗಳಲ್ಲಿ ಆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ಗೃಹ ಸಚಿವರು, ಸಿಎಂ ಇದು ವೈಯಕ್ತಿಕ ಅಂತಾ ಹೇಳಿಕೆ ನೀಡಿದ್ದಾರೆ, ಇದರಲ್ಲಿ ಏನು ವೈಯಕ್ತಿಕ ಇದೆ.
ವೈಯಕ್ತಿಕ ಇದ್ದಿದ್ರೆ ಕೊಲೆಯಾದ ಆ ಹೆಣ್ಣು ಮಗು ತಾಯಿಗೆ ಯಾಕೆ ಫೋನ್ ಮಾಡುತ್ತಿದ್ದಳು ? ಎಂದರು. ಇನ್ನೂ ಆರೋಪಿ ಮನೆಗೆ ಪೊಲೀಸ್ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇದು ನಾಚಿಕೆಗೇಡಿನ ವಿಷಯ ಮುಸ್ಲೀಂರಿಗೆ ಕಾಂಗ್ರೆಸ್ ನವರು ಪ್ರಚೋದನೆ ನೀಡುತ್ತಿದ್ದಾರೆ. ಸಂತೋಷ ಲಾಡ್ ಒಬ್ಬ ಸಚಿವ ಅವನ ಮನೇಲಿ ಈ ರೀತಿ ಆಗಿದ್ರೆ ಸುಮ್ಮನೇ ಇರ್ತಿದ್ರಾ ? ಗೃಹ ಸಚಿವರ ಮನೆಯಲ್ಲಿ ಈ ರೀತಿ ಆಗಿದ್ದರೆ ಸುಮ್ಮನೇ ಇರುತ್ತಿದ್ದರಾ ? ಅಲ್ಪಸಂಖ್ಯಾತರ ರಕ್ಷಣೆಗೆ ಕಾನೂನು ಜಾರಿಗೆ ತರೋದಾಗಿ ಹೇಳ್ತಾರೆ, ಆದ್ರೆ ! ಹಿಂದೂಗಳ ರಕ್ಷಣೆ ಮಾಡೋರ‌್ಯಾರು ? ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಯತ್ನಾಳ್ ಹರಿಹಾಯ್ದರು. ಮದರಸಾಗಳಲ್ಲಿ ಮುಸ್ಲೀಂರಿಗೆ ಇದೆ ಶಿಕ್ಷಣ ನೀಡುತ್ತಾರೆ, ಹಿಂದೂಗಳ ಮೇಲೆ ಈ ರೀತಿ ಹಲ್ಲೆ ಮಾಡುವಂತಹ ಶಿಕ್ಷಣವನ್ನೇ ನೀಡುತ್ತಾರಾ ? ಎಂದು ಪ್ರಶ್ನಿಸಿದ್ದಾರೆ.