ನವದೆಹಲಿ : ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಮಾಡಿರೋದು ನಿಜ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಒಪ್ಪಿಕೊಂಡಿದೆ. ಸುದ್ದಿಗೋಷ್ಠಿ ನಡೆಸಿದ ಟಿಟಿಡಿ ಎಕ್ಸ್‌ಕ್ಯೂಟೀವ್ ಆಫೀಸರ್ ಶ್ಯಾಮಲಾ ರಾವ್, ಈ ಪ್ರಸಾದಕ್ಕೆ ಬಳಸುವ ತುಪ್ಪದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿ ಟೆಸ್ಟ್ ಮಾಡಲಾಗಿತ್ತು. ಲ್ಯಾಬ್‌ನ ವರದಿಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬುದು ದೃಢಪಟ್ಟಿದೆ. ಗುಜರಾತ್‌ನ ಎನ್‌ಡಿಡಿಬಿ ಸಿಎಎಲ್‌ಎಫ್ ಲ್ಯಾಬ್‌ನ ವರದಿಯಲ್ಲಿ ದೃಢಪಟ್ಟಿದೆ. ಲಡ್ಡು ತಯಾರಿಕೆಗೆ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ದನದ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟವಿರುವ ತುಪ್ಪ ಪೂರೈಸಲಾಗಿದೆ. ತುಪ್ಪ ಪೂರೈಸಿದ ಎಆರ್ ಡೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಟಿಟಿಡಿ ಬಳಿ ಲ್ಯಾಬ್ ಇಲ್ಲದಿರುವುದರಿಂದ ಈ ಹಿಂದೆ ಟೆಸ್ಟ್ ಮಾಡಿರಲಿಲ್ಲ, 20:32ರಷ್ಟು ಕಲಬೆರಕೆ ತುಪ್ಪ ಇರುವುದು ದೃಢಪಟ್ಟಿದೆ. ಹಿಂದಿನ ಸರ್ಕಾರ ತುಪ್ಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು ಎಂದು ಶ್ಯಾಮಲಾ ರಾವ್ ಮಾಹಿತಿ ನೀಡಿದ್ದಾರೆ. ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಆಂಧ್ರ ಪ್ರದೇಶದ ಸಿಎಂ ಈ ಹಿಂದೆ ಪ್ರಸ್ತಾಪಿಸಿದ್ದರು ಎಂದು ಟಿಟಿಡಿ ಸಿಇಓ ಶ್ಯಾಮಲಾ ರಾವ್ ಹೇಳಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ