ಬಳ್ಳಾರಿ: ತುಂಗಭದ್ರಾ ಡ್ಯಾಂನ 19ನೇ ತೂಬಿನಲ್ಲಿ ಗೇಟ್ ಅಳವಡಿಸುವ ಮೊದಲ ಪ್ರಯತ್ನ ವಿಫಲವಾಗಿದೆ. ತಜ್ಞರು ಎರಡನೇ ಪ್ಲಾನ್ ಮಾಡಿಕೊಂಡಿದ್ದು, ಇಂದು ಬೆಳಗ್ಗೆಯಿಂದಲೇ ಗೇಟ್ ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ.
ಮೊದಲ ಪ್ರಯತ್ನದಲ್ಲಿ ಜಿಂದಾಲ್ ಕಂಪನಿಯ ಗೇಟ್ ಎಲಿಮೆಂಟ್‌ನ ಕೊಂಡಿಗಳು 19ನೇ ತೂಬಿನ ಕಲ್ಲಿನ ಪಿಲ್ಲರ್‌ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಗುರುವಾರ ರಾತ್ರಿ ಜಿಂದಾಲ್ ಕಂಪನಿಯ ಮತ್ತೊಂದು ಗೇಟ್ ಅಣೆಕಟ್ಟುಪ್ರದೇಶಕ್ಕೆ ಬಂದಿದ್ದು, ಇದರೊಂದಿಗೆ ಹೊಸಳ್ಳಿಯಲ್ಲಿ ಸಿದ್ಧಪಡಿಸಲಾದ ಮತ್ತೊಂದು ಗೇಟ್ ಕೂಡ ತರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಎರಡು ಹಂತದಲ್ಲಿ ಪ್ರಯತ್ನಿಸಲು ತಜ್ಞರು ಚಿಂತಿಸಿದ್ದರು. ಈ ಕುರಿತು ತುಂಗಭದ್ರಾ ಮಂಡಳಿಯಿಂದ ಸಿಎಂಗೆ ನೀಡಿದ ಮಾಹಿತಿಯಲ್ಲಿ ನಮೂದಿಸಲಾಗಿದೆ. ಇಂದು ಮತ್ತೆ ಗೇಟ್ ಅಳವಡಿಕೆ ಯತ್ನ ನಡೆಸುವ ಸಾಧ್ಯತೆ ಇದ್ದು, ಬಹುತೇಕ ಇಂದು ಸಂಜೆಯೊಳಗೆ ಫಲಿತಾಂಶ ಲಭಿಸುವ ವಿಶ್ವಾಸವಿದೆ.