ಬೆಂಗಳೂರು: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಮಿಶ್ರಣ ಪ್ರಕರಣ ಬಂದಾಗಿನಿಂದ ರಾಜ್ಯದ ಜನರಲ್ಲಿ ಕೂಡ ತುಪ್ಪದ ಕ್ವಾಲಿಟಿ ಬಗ್ಗೆ ಅಪಸ್ವರ ಬಂದಿತ್ತು. ಸದ್ಯ ಕರ್ನಾಟಕದಲ್ಲಿರುವ ತುಪ್ಪಗಳನ್ನು ಆರೋಗ್ಯ ಇಲಾಖೆ & fssai ಟೆಸ್ಟ್ ಮಾಡಿದೆ.
ಸುಮಾರು 230 ವಿವಿಧ ಬ್ರ್ಯಾಂಡ್‌ನ ತುಪ್ಪಗಳನ್ನ FSSAI ಟೆಸ್ಟ್ ಮಾಡಿದ್ದು, 230ರಲ್ಲಿ ಸುಮಾರು 5 ತುಪ್ಪದ ಬ್ರ್ಯಾಂಡ್‌ಗಳು ಅನ್‌ಸೇಫ್ ಅಂತ ಬಂದಿವೆ. 5 ಬೇರೆ ಬೇರೆ ತುಪ್ಪಗಳಲ್ಲಿ ಡಾಲ್ಡ್ ಹಾಗೂ ವನಸ್ಪತಿ ಪತ್ತೆ ಆಗಿದ್ದು ಜನ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಈ ಬಗ್ಗೆ ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಕೊಟ್ಟಿದ್ದು ಯಾರು ಆತಂಕ ಪಡುವ ಅಗತ್ಯವಿಲ್ಲ ಅಂತ ತಿಳಿಸಿದ್ದಾರೆ.