ತಿಪಟೂರು: ಮಳೆ ಬಾರದ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡುವ ವಿಶಿಷ್ಟ ಆಚರಣೆಯೊಂದು ನಡೆದಿದ್ದು ಈ ಆಚರಣೆ ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿದೆ. ಜಿಲ್ಲೆಯ ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮದಲ್ಲಿ ಮಳೆಗಾಗಿ ಚಿಕ್ಕ ಮಕ್ಕಳಿಗೆ ಮದುವೆ ಮಾಡಲಾಗಿದ್ದು ಈ ಪದ್ಧತಿ ನೂರಾರು ವರ್ಷಗಳ ಇತಿಹಾಸವಿದೆ. 8 ದಿನಗಳ ಕಾಲ ಕಳಸ ಪೂಜೆ,9ನೇ ದಿನ ಚಂದ ಮಾಮ ಪೂಜೆ,ಆಚರಣೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಚಿಕ್ಕ ಮಕ್ಕಳಿಗೆ ಮದುವೆ ಕಾರ್ಯ ನಡೆದಿದ್ದು ಇಬ್ಬರು ಬಾಲಕಿಯರಿಗೆ ಗಂಡು, ಹೆಣ್ಣಿನ ವೇಷ ಧರಿಸಿ ಮದುವೆ ಆಚರಣೆಗಳನ್ನು ಮಾಡಲಾಗಿದೆ. ಮದುಮಗನಾಗಿ ಸಿಂಧು ಮತ್ತು ಮದುಮಗಳಾದ ಕೃತಿಕ ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಗ್ರಾಮದಲ್ಲಿ ನಡೆದಿರುವ ಈ ವಿಶಿಷ್ಟ ಆಚರಣೆಗೆ ಹಲವು ತಹೇವಾರಿ ಚರ್ಚೆಗಳು ನಡೆಯುತ್ತಿದೆ.