ತೂಕ ಕಡಿಮೆ ಮಾಡಿಕೊಳ್ಳಬೇಕಾ? ಹಾಗಾದ್ರೆ ಬೆಳಗ್ಗಿನ ತಿಂಡಿಗೆ ಅವಲಕ್ಕಿ ಉಪ್ಪಿಟ್ಟು ಮಾಡಿ ತಿನ್ನಿ!

ಬೆಳಗ್ಗೆ ಮಾಡುವ ವಿವಿಧ ತಿಂಡಿಗಳಲ್ಲಿ ಅವಲಕ್ಕಿ ಉಪ್ಪಿಟ್ಟು ಅಥವಾ ಅವಲಕ್ಕಿ ಒಗ್ಗರಣೆ ಕೂಡ ಒಂದು. ಡಾಕ್ಟರ್ ಹೇಳುವ ಪ್ರಕಾರ ಇದು ಎಷ್ಟು ಆರೋಗ್ಯಕರ ಗೊತ್ತಾ?

ಅವಲಕ್ಕಿ ಉಪ್ಪಿಟ್ಟು ಸೇವನೆಯಿಂದ ಜೀರ್ಣ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ತೂಕ ನಿಯಂತ್ರಣದಲ್ಲಿ ಕೂಡ ಇದು ಸಹಾ ಯಕ್ಕೆ ಬರುತ್ತದೆ. ಅವಲಕ್ಕಿಯಿಂದ ತಯಾರು ಮಾಡುವ ವಿವಿಧ ಆಹಾರ ಉತ್ಪನ್ನಗಳಲ್ಲಿ ಮೊಸರು, ಹಣ್ಣುಗಳು, ತರಕಾರಿಗಳನ್ನು ಸೇರಿಸಿ ಸೇವಿಸುವುದರಿಂದ ಅಧಿಕ ಲಾಭಗಳು ನಮ್ಮದಾಗುತ್ತವೆ.

ಹೆಚ್ಚಿನ ಕಾರ್ಬೋಹೈಡ್ರೇಟ್ ಸಿಗುವುದರಿಂದ ಇದು ದೇಹದ ತೂಕದ ಮೇಲೆ ಪ್ರಭಾವ ಬೀರುತ್ತಾ ಎನ್ನುವ ಅನುಮಾನ ಜನರಲ್ಲಿದೆ. ಹೀಗಾಗಿ ಅವಲಕ್ಕಿಯನ್ನು ಬೆಳಗಿನ ತಿಂಡಿ ಸಮಯದಲ್ಲಿ ಸೇವನೆ ಮಾಡುವುದು ಬೇಡ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರಾದ ರಿಚ ಗಂಗಾಣಿ ಹೇಳುವ ಹಾಗೆ ಅವಲಕ್ಕಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Advertisement

ಆರೋಗ್ಯಕ್ಕೆ ಅವಲಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ಸ್ ಹೇಗೆ?

ಕಾರ್ಬೋಹೈಡ್ರೇಟ್ ಪ್ರಮಾಣ ನಮ್ಮ ದೇಹಕ್ಕೆ ಸಿಗುವ ಉತ್ತಮ ಪೌಷ್ಟಿ ಕಾಂಶಗಳಲ್ಲಿ ಒಂದು. ಇದು ನಮ್ಮ ದೇಹದ ಶಕ್ತಿಯ ಪ್ರಮಾಣವನ್ನು ಉತ್ತೇಜಿಸುವುದರ ಜೊತೆಗೆ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.

ತೂಕವನ್ನು ನಿಯಂತ್ರಣದಲ್ಲಿಡುತ್ತದೆ

ಆಕ್ಸಿಡೇಟೀವ್ ಒತ್ತಡವನ್ನು ನಿರ್ವಹಣೆ ಮಾಡುವುದರ ಜೊತೆಗೆ ತೂಕ ನಿಯಂತ್ರಣದಲ್ಲಿ ಕೂಡ ಸಹಾಯ ಮಾಡುತ್ತದೆ. ಆದರೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್ ಅಂಶಗಳು ಇದಕ್ಕೆ ತದ್ವಿರುದ್ಧ. ಒಳ್ಳೆಯ ಕಾರ್ಬೋ ಹೈಡ್ರೇಟ್ ಪ್ರಮಾಣ ನಮ್ಮ ದೇಹದ ಮೇಲೆ ಅನೇಕ ಆರೋಗ್ಯಕರ ಪರಿಣಾಮಗಳನ್ನು ಉಂಟುಮಾಡುತ್ತದೆ.

ಹಾಗಾದರೆ ಅವಲಕ್ಕಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಾ?

ಬೆಳಗಿನ ಸಮಯದಲ್ಲಿ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದ ಕಾರ್ಯ ಚಟುವಟಿಕೆ ಉತ್ತಮಗೊಳ್ಳುತ್ತದೆ. ಜೊತೆಗೆ ಜೀರ್ಣಶಕ್ತಿ ಕೂಡ ಹೆಚ್ಚಾಗುತ್ತದೆ. ಮೆಟಬಾಲಿಸಂ ಪ್ರಕ್ರಿಯೆ ಚೆನ್ನಾಗಿ ನಡೆಯುವುದರಿಂದ ದೇಹದ ತೂಕ ನಿಯಂತ್ರಣ ಆಗುತ್ತದೆ.

ಪೌಷ್ಟಿಕ ಸತ್ವಗಳು

ಇದರಲ್ಲಿ ಇರುವಂತಹ ವಿವಿಧ ಬಗೆಯ ಪೌಷ್ಟಿಕಾಂಶಗಳು ನಾರಿನ ಅಂಶ, ಕಬ್ಬಿಣದ ಅಂಶ, ಪೊಟಾಸಿಯಂ ಎಲ್ಲವೂ ಸಹ ದೇಹಕ್ಕೆ ಶಕ್ತಿ ಚೈತನ್ಯವನ್ನು ನೀಡಿ ಕೊಲೆಸ್ಟ್ರಾಲ್ ನಿಯಂತ್ರಣ ದಲ್ಲಿ ಸಹಾಯ ಮಾಡುತ್ತದೆ.

ಇದರ ಜೊತೆಗೆ ಇನ್ಸುಲಿನ್ ಪ್ರಮಾಣವನ್ನು ಉತ್ತಮವಾಗಿ ಬಳಕೆಯಾ ಗುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಆರೋಗ್ಯ ಕರವಾದ ಜೀವನ ಶೈಲಿಯನ್ನು ಹಾಗು ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವವರಿಗೆ ಅವಲಕ್ಕಿ ಒಂದು ಉತ್ತಮ ಉಪಹಾರ ಎಂದು ಹೇಳಬಹುದು.​

ತೂಕ ಇಳಿಸುವವರಿಗೆ ಸಲಹೆಗಳು

ಅವಲಕ್ಕಿಯಿ ಅಷ್ಟು ಬೇಗನೆ ಹೊಟ್ಟೆಯಲ್ಲಿ ಜೀರ್ಣವಾಗುವುದು ಇಲ್ಲ. ಇದರಿಂದಾಗಿ ದೀರ್ಘ ಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡು ವುದು.

ಹೀಗಾಗಿ ತೂಕ ಇಳಿಸಲು ಬಯಸುವವರು, ಬೆಳಗ್ಗಿನ ಉಪ ಹಾರಕ್ಕೆ ಅವಲಕ್ಕಿ ಉಪ್ಪಿಟ್ಟು ಮಾಡಿ ಸೇವನೆ ಮಾಡಿದರೆ ಒಳ್ಳೆಯದು.

ಇನ್ನು ಅವಲಕ್ಕಿಯಲ್ಲಿ ನಾರಿನಾಂಶದಿಂದ ಸಮೃದ್ಧವಾಗಿ ಸಿಗುವುದರ ಜೊತೆಗೆ, ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.​

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement