ಹೈದರಾಬಾದ್ : ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜಗತ್ ಪ್ರಕಾಶ್ ನಡ್ಡಾ ನೇತೃತ್ವದಲ್ಲಿ ಶುಕ್ರವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಯಿತು. ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಮೇಲೆ ಅಮಾನತುಗೊಂಡಿದ್ದ ಟಿ ರಾಜಾ ಸಿಂಗ್ ಅವರನ್ನು ಪಕ್ಷ ಇಂದು ಮುಂಜಾನೆ ಹಿಂಪಡೆದುಕೊಂಡಿದೆ . ಅವರು ಗೋಷ್ಮಹಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಕರೀಂನಗರ ಕ್ಷೇತ್ರದಿಂದ ಸಂಜಯ್ ಕುಮಾರ್ ಬಂಡಿ ಸ್ಪರ್ಧಿಸಲಿದ್ದಾರೆ.ಹುಜೂರಾಬಾದ್ ಮತ್ತು ಗಜ್ವೇಲ್ ಸೇರಿದಂತೆ ಎರಡು ಕ್ಷೇತ್ರಗಳಿಂದ ರಾಜೇಂದ್ರ ಈಟಾಳ ಕಣಕ್ಕೆ ಇಳಿಯಲಿದ್ದು. ತೆಲಂಗಾ ರಾಷ್ಟ್ರ ಸಮಿತಿಯ ಮಾಜಿ ಸದಸ್ಯ ಎಟಾಲ ಅವರು ಗಜ್ವೇಲ್‌ನಲ್ಲಿ ತಮ್ಮ ಮಾಜಿ ಪಕ್ಷದ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರೊಂದಿಗೆ ಸ್ಪರ್ಧಿಸಲಿದ್ದಾರೆ.
ಮಾಜಿ ಅಧ್ಯಕ್ಷ ಸಂಜಯ್ ಕುಮಾರ್ ಬಂಡಿ, ಬಾಪು ರಾವ್ ಸೋಯಂ ಮತ್ತು ಅರವಿಂದ್ ಧರ್ಮಪುರಿ ಸೇರಿದಂತೆ ಹಾಲಿ ಸಂಸದರ ಹೆಸರು ಕೂಡ ಬಿಜೆಪಿ ಬಿಡುಗಡೆ ಪಟ್ಟಿಯಲ್ಲಿದೆ.