ಚಿತ್ರದುರ್ಗ: 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ, ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಕಾರ್ಯಕ್ರಮದಡಿ ಸೋಲಾರ್ ಪಂಪ್‍ಸೆಟ್ ಹಾಗೂ ವಿವಿಧ ಯಂತ್ರೋಪಕರಣ ಖರೀದಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯ ವರ್ಗದ ರೈತರು ಶೇ.40 ರಷ್ಟು ಹಾಗೂ ಪ.ಜಾತಿ ಮತ್ತು ಪ.ಪಂಗಡ, ಫಲಾನುಭವಿಗಳು ಶೇ. 50 ರಷ್ಟು ಸಹಾಯಧನ ಪಡೆಯಬಹುದು ಮತ್ತು 3 ಹೆಚ್.ಪಿ. ಸೋಲಾರ್ ಪಂಪ್‍ಸೆಟ್‍ಗಳಿಗೆ ರೂ.1.00 ಲಕ್ಷ, 5 ಹೆಚ್.ಪಿ. ಹಾಗೂ ಹೆಚ್ಚಿನ ಸಾಮಥ್ರ್ಯದ ಸೋಲಾರ್ ಪಂಪ್‍ಸೆಟ್‍ಗಳಿಗೆ ರೂ. 1.50 ಲಕ್ಷ ಸಹಾಯಧನ ಪಡೆಯಲು, ಹೊಸ ಪ್ರದೇಶ ವಿಸ್ತರಣೆ (ದಾಳಿಂಬೆ, ಡ್ರಾಗನ್ ಪ್ರೂಟ್ ಮತ್ತು ನುಗ್ಗೆ ಬೆಳೆಗಳಿಗೆ ಶೇ.40 ರಂತೆ 0.10 ಹೆ. ನಿಂದ ಗರಿಷ್ಟ 2.00 ಹೆ. ವರೆಗೆ ಸಹಾಯಧನ ನೀಡಲಾಗುವುದು), ಅಡಿಕೆ ಬೆಳೆಯಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆಗೆ 0.20 ಹೆ ನಿಂದ 4.00 ಹೆ.ವರೆಗೆ ಸಹಾಯಧನ ನೀಡಲಾಗುವುದು. ಅಡಿಕೆ ಬೆಳೆಯಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆಗೆ 0.20 ಹೆ ನಿಂದ 4.00 ಹೆ.ವರೆಗೆ ಸಹಾಯಧನ ನೀಡಲಾಗುವುದು.
SMAM ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಶೇ.40 ರಷ್ಟು ಹಾಗೂ ಪ.ಜಾತಿ ಮತ್ತು ಪ.ಪಂಗಡ, ಸಣ್ಣ ಮತ್ತು ಅತೀ ಸಣ್ಣ, ಮಹಿಳಾ ಫಲಾನುಭವಿಗಳು ಶೇ. 50 ರಷ್ಟು ಸಹಾಯಧನ ಪಡೆಯಬಹುದು. (ಗರಿಷ್ಟ ರೂ.1.25 ಲಕ್ಷಗಳು/ಗರಿಷ್ಟ 5 ಸಂಖ್ಯೆಯ ಯಂತ್ರೋಪಕರಣಗಳನ್ನು ಖರೀದಿಸಲು) ಆಸಕ್ತ ರೈತ ಫಲಾನುಭವಿಗಳು ಪಹಣಿ, ಬೆಳೆದೃಢೀಕರಣ, ಚೆಕ್‍ಬಂದಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಜಾತಿ ಪ್ರಮಾಣ ಪತ್ರ, ಇನ್ನು ಮುಂತಾದ ದಾಖಲೆಗಳನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.
ಗುರಿಗೆ ಅನುಗುಣವಾಗಿ ಮಾರ್ಗಸೂಚಿಯನುಸಾರ ಫಲಾನುಭವಿಗಳನ್ನು ಜೇಷ್ಟತಾ ಆಧಾರದ ಮೇರೆಗೆ ಸಹಾಯಧನಕ್ಕೆ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ (ಜಿಪಂ), ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗೂ ಮೊಳಕಾಲ್ಮೂರು ತಾಲ್ಲೂಕು / ಎಲ್ಲಾ ತಾಲ್ಲೂಕಿನ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.