ಚಿತ್ರದುರ್ಗ: 2023-24ನೇ ಸಾಲಿನ ಹಿರಿಯೂರು ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿಗಳನ್ನು ಹಿರಿಯೂರು ತೋಟಗಾರಿಕೆ ಇಲಾಖೆಯಿಂದ ಪಡೆದು ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 16 ರ ಒಳಗೆ ಸಲ್ಲಿಸಬೇಕು. ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಸೌಲಭ್ಯಗಳು: ತೋಟಗಾರಿಕೆ ಬೆಳೆಗಳಾದ ಬಾಳೆ, ದಾಳಿಂಬೆ, ಸೀಬೆ, ಬಿಡಿ ಹೂವು ಬೆಳೆಗಳನ್ನು ಹೊಸದಾಗಿ ಬೆಳೆಯಲು ಸಹಾಯಧನ ನೀಡಲಾಗುವುದು. ಸಂರಕ್ಷಿತ ಬೇಸಾಯ ಕಾರ್ಯಕ್ರಮ, ತೋಟಗಾರಿಕೆ ಬೆಳೆಗಳಿಗೆ ಪ್ಲಾಸ್ಟಿಕ್ ನೆಲಹೊಂದಿಕೆ, ವೈಯುಕ್ತಿಕ ಕೃಷಿಹೊಂಡ ಹಾಗೂ ಸಾಮೂಹಿಕ ಕೃಷಿಹೊಂಡ, ಕೊಯ್ಲೋತ್ತರ ನಿರ್ವಹಣೆಯಡಿ ಈರುಳ್ಳಿ ಸಂಗ್ರಹಣಾ ಘಟಕ, ಪ್ಯಾಕ್‌ಹೌಸ್‌ಗೆ ಸಹಾಯಧನ ನೀಡಲಾಗುವುದು. ಯೋಜನೆಯಡಿ ಕಾರ್ಯಕ್ರಮಗಳಿಗೆ ಈ ಹಿಂದೆ ಇಲಾಖೆಯಿಂದ ಸಹಾಯಧನ ಪಡೆಯದೇ ಇರುವ ಪರಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ, ಅಲ್ಪಸಂಖ್ಯಾತರ, ಅಂಗವಿಕಲರಿಗೆ ಫಲಾನುಭವುಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಹಿರಿಯೂರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಲೋಕೇಶ್ ತಿಳಿಸಿದ್ದಾರೆ.