ಛತ್ತೀಸ್‌ಗಢ : ಒಂದು ವರ್ಷದ ಮಗುವೊಂದು ತಂದೆಯ ಕೈನಿಂದ ಜಾರಿ 40 ಅಡಿ ಕೆಳಗೆ ಬಿದ್ದ ಘಟನೆ ಛತ್ತಿಸ್‌ಗಢದ ರಾಜಧಾನಿ ರಾಯ್‌ಪುರದ ಮಾಲ್ ಒಂದರಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೃಶ್ಯ ನೋಡಿದ ಪ್ರತಿಯೊಬ್ಬರೂ ಶಾಕ್ ಒಳಗಾಗಿದ್ದು, ತಂದೆಯ ಬೇಜವಾಬ್ಧಾರಿಯ ಬಗ್ಗೆ ಟೀಕೆ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವುದೇನು ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಮಗುವನ್ನು ಎತ್ತಿಕೊಂಡ ತಂದೆಯೊಬ್ಬ ಎಸ್ಕಲೇಟರ್ ಬಳಿ ಬರುವುದು ಕಾಣಿಸುತ್ತದೆ. ಈ ವೇಳೆ ಇನ್ನೊಂದು ಮಗು ಎಸ್ಕಲೇಟರ್ ಹತ್ತಲು ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. ಈ ವೇಳೆ ಆ ಮಗುವನ್ನು ಎಸ್ಕಲೇಟರ್ ಹತ್ತಿಸಲು ಪ್ರಯತ್ನಿಸುವಾಗ ಈ ಧುರ್ಘಟನೆ ನಡೆದಿದೆ. ಒಂದು ವರ್ಷದ ಮಗುವಾಗಿದ್ದ ಕಾರಣ ಆ ವ್ಯಕ್ತಿ ಮಗುವಿನ ಬೆನ್ನು ಹಿಡಿದಿದ್ದ ಕೈ ತಪ್ಪಿದಾಗ ಹಿಂದಕ್ಕೆ ಬಾಗಿದೆ. ಈ ವೇಳೆ ಮಗು ಆ ವ್ಯಕ್ತಿಯ ಕೈನಿಂದ ಜಾರಿ ಸುಮಾರು 40 ಅಡಿ ಆಳಕ್ಕೆ ಬಿದ್ದಿದೆ. ಇದು ಆಕಸ್ಮಿಕವಾಗಿದ್ದರೂ ಮಗುವನ್ನು ಹಿಡಿದುಕೊಂಡಿದ್ದ ತಂದೆಯ ಬೇಜವಾಬ್ಧಾರಿ ಕೂಡಾ ಎದ್ದು ಕಾಣುತ್ತಿದೆ.
https://twitter.com/hashtag/RaipurNews?ref_src=twsrc%5Etfw%7Ctwcamp%5Etweetembed%7Ctwterm%5E1770231800515657790%7Ctwgr%5E98b84e1c92cb4203755e9ebe70f64ece16f7e0b0%7Ctwcon%5Es1_&ref_url=https%3A%2F%2Fnammakudlanews.com%2Fthe-child-slipped-from-his-fathers-hand-and-fell-40-feet-deep-viral-video%2F&src=hashtag_click