ತರಕಾರಿ ಸಲಾಡ್, ಹಣ್ಣುಗಳ ಸಲಾಡ್ ತಿಂದಿರುತ್ತೀರಿ,ಇಲ್ಲಿ ರುಚಿಕರವಾದ ಥಾಯ್ ಮ್ಯಾಂಗೋ ಸಲಾಡ್ ಮಾಡುವ ವಿಧಾನ ಇದೆ. ಸುಲಭವಾಗಿ ಕೂಡ ಇದನ್ನು ಮಾಡಿ ಮನೆಮಂದಿಯೆಲ್ಲಾ ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು: 1 ಮಾವಿನಕಾಯಿ (ತೆಳುವಾಗಿ ಉದ್ದಕ್ಕೆ ಸೀಳಿಕೊಳ್ಳಿ, ½ ಈರುಳ್ಳಿ (ತೆಳುವಾಗಿ ಕತ್ತರಿಸಿಕೊಳ್ಳಿ) ಒಂದು ಮುಷ್ಠಿ – ಹುರಿದ ಕಡಲೆಬೀಜ, 1 ಟೀ ಸ್ಪೂನ್ – ಹುರಿದ ಬಿಳಿ ಎಳ್ಳು, 1 ಟೀ ಸ್ಪೂನ್ – ಎಣ್ಣೆ, ¼ ಕಪ್ ನಷ್ಟು ಕೊತ್ತಂಬರಿ ಸೊಪ್ಪು, 1 ಟೇಬಲ್ ಸ್ಪೂನ್ – ಹುಣಸೆಹಣ್ಣಿನ ರಸ, 1 ಟೇಬಲ್ ಸ್ಪೂನ್ – ಸಕ್ಕರೆ, ಉಪ್ಪು ರುಚಿಗೆ ತಕ್ಕಷ್ಟು, 1 ಟೀ ಸ್ಪೂನ್ – ಚಿಲ್ಲಿ ಫ್ಲೇಕ್ಸ್.
ಮಾಡುವ ವಿಧಾನ: ಒಂದು ದೊಡ್ಡ ಬೌಲ್ ತೆಗೆದುಕೊಳ್ಳಿ. ಅದಕ್ಕೆ ಕತ್ತರಿಸಿದ ಮಾವಿನಕಾಯಿ, ಈರುಳ್ಳಿ, ಬಿಳಿಎಳ್ಳು, ಕಡಲೆಬೀಜ, ಹುಣಸೆಹಣ್ಣಿನ ರಸ ಉಪ್ಪು, ಎಣ್ಣೆ, ಚಿಲ್ಲಿ ಫ್ಲೇಕ್ಸ್, ಸಕ್ಕರೆ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಅದರ ಮೇಲೆ ಹಾಕಿ ಮಿಕ್ಸ್ ಮಾಡಿ. 10 ನಿಮಿಷಗಳ ಕಾಲ ಹಾಗೆಯೇ ಇಟ್ಟು ಸರ್ವ್ ಮಾಡಿ. ಇದೊಂದು ರೀತಿ ಹುಳಿ, ಸಿಹಿ – ಖಾರ ಎಲ್ಲವೂ ಮಿಶ್ರಣವಾಗಿ ಚೆನ್ನಾಗಿರುತ್ತದೆ.