ಪಣಜಿ : ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್ ಗೆ ಪರಾರಿಯಾಗಿದ್ದ ಗೋವಾದ ರೋಮಿಯೋ ಲೇನ್ ನೈಟ್‌ಕ್ಲಬ್ ಮಾಲೀಕರನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಕ್ಲಬ್ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ರೋಮಿಯೋ ಲೇನ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದ್ದರು.
ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿಯ ನಂತರ ದೇಶದಿಂದ ಪಲಾಯನ ಮಾಡಿದ ಲೂತ್ರಾ ಸಹೋದರರ ಒಡೆತನದ ಗೋವಾದ ವಾಗೇಟರ್ ಪ್ರದೇಶದಲ್ಲಿರುವ ರೋಮಿಯೋ ಲೇನ್ ರೆಸ್ಟೋರೆಂಟ್ ಅನ್ನು ಕೆಡವಲಾಯಿತು. ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ಇದರ ಮಾಲೀಕರು.
ರೋಮಿಯೋ ಲೇನ್ ಬಳಿ ಇರುವ ಅವರ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ಡಿಸೆಂಬರ್ 7 ರಂದು ಬೆಂಕಿಗೆ ಆಹುತಿಯಾಗಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕ್ಲಬ್‌ನ ಮಾಲೀಕರನ್ನು ಥೈಲ್ಯಾಂಡ್ನಲ್ಲಿ ಬಂಧಿಸಲಾಗಿದೆ.
ಶೀಘ್ರದಲ್ಲೇ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಕ್ಲಬ್‌ನ ನಾಲ್ವರು ಮಾಲೀಕರ ಪೈಕಿ ಅಜಯ್ ಗುಪ್ತಾನನ್ನು ಬುಧವಾರ ಗೋವಾ ಪೊಲೀಸರು ಬಂಧಿಸಿದ್ದಾರೆ.






























