ಬೆಂಗಳೂರು: ಎಂತಹ ಕಾಲ ಬಂತಪ್ಪ ಈ ರೀತಿನೂ ಜನ ಇರ್ತಾರಾ? ಅನ್ನೋ ಹಾಗೆ ಆಗಿದೆ. ಒಬ್ಬ ನಟನಿಗಾಗಿ ಹೆತ್ತ ಮಗುವಿಗೆ ಪೋಷಕರು ಖೈದಿ ವೇಷ ಹಾಕಿ ಫೋಟೋ ಶೂಟ್ ಮಾಡಿದ್ದಾರೆ.
ದರ್ಶನ್‌ಗೆ ನೀಡಿರೂ ವಿಚಾರಣಾಧೀನ ಖೈದಿ ಸಂಖ್ಯೆ 6106 ನಂಬರ್ ಮಗು ಬಟ್ಟೆ ಮೇಲೆ ಹಾಕಿಸಿದ್ದಾರೆ. ಈ ವರ್ತನೆಗೆ ನಟನ ಮೇಲಿನ ಅಭಿಮಾನಾನೋ ಅಥವಾ ಅಂಧಾಭಿಮಾನವೋ ಅನ್ನೋದು ಅವರ ವಿವೇಚನೆಗೆ ಬಿಟ್ಟಿದ್ದು.
ಒಂದು ವರ್ಷದ ಮಗುವಿಗೆ ಖೈದಿಯ ರೀತಿ ಬಿಳಿ ಬಟ್ಟೆ, ಖೈದಿ ನಂಬರ್, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಫೋಟೋ ಶೂಟ್ ಮಾಡಿಸಿದ್ದಾರೆ. ಹಿಂದೆಲ್ಲ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ಅವರಂತಹ ಗಣ್ಯ ವ್ಯಕ್ತಿಗಳ ರೀತಿಯ ಫೋಟೋ ಶೂಟ್ ಟ್ರೆಂಡ್ ಆಗಿತ್ತು.
ಆದರೆ ಬೆಳೆಯುವ ಮಗುವಿಗೆ ಖೈದಿ ಫೋಟೋಶೂಟ್ ಮಾಡಿಸೋದೆ ಟ್ರೆಂಡ್ ಆಗಿದೆ. ಮಗುವಿಗೆ ಖೈದಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.