ಬೆಂಗಳೂರು: ದರ್ಶನ್ ಕೇಸ್ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಹಣೆಬರಹ ಅಂತ ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನೂ ಮಾಡೋಕಾಗಲ್ಲ ಎಂದಿದ್ದಾರೆ.
ಮಾತಾಡೋಕೆ ಹೋದರೂ ನಾವು ಮಾಡುತ್ತಾ ಇರುವುದು ಸರಿ ಇದೆಯಾ ಎಂದು ಮೊದಲು ಯೋಚನೆ ಮಾಡಬೇಕು. ಅದನ್ನು ಹೊರತುಪಡಿಸಿ ಏನೂ ಹೇಳೋಕೆ ಆಗಲ್ಲ. ರೇಣುಕಾಸ್ವಾಮಿ ಹಾಗೂ ದರ್ಶನ್ ಕುಟುಂಬಕ್ಕೆ ನೋವಾಗುತ್ತದೆ. ದರ್ಶನ್ ಮಗನ ಬಗ್ಗೆ ಬೇಸರ ಆಗುತ್ತೆ. ನಾವು ಎಲ್ಲದನ್ನೂ ಎದುರಿಸಬೇಕು. ತನಿಖೆ ನಡೆಯುತ್ತಿದೆ. ಏನಾಗುತ್ತೋ ನೋಡೋಣ’ ಎಂದಿದ್ದಾರೆ.